ನಾಡಪ್ರಭು ಕೆಂಪೇಗೌಡರು ಕರ್ನಾಟಕ ಮಾತ್ರವಲ್ಲದೇ ಭಾರತದ ಆಸ್ತಿ-ನಿಖಿಲ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರುನಲ್ಲಿ ಒಕ್ಕಲಿಗರ ಸಂಘ ಆಲ್ದೂರು ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ‌ ಶ್ರೀ ಡಾ. ನಿರ್ಮಲಾನಂದ‌ನಾಥ ಮಹಾಸ್ವಾಮಿಗಳು, ಶೃಂಗೇರಿ ಆದಿಚುಂಚನಗಿರಿ ಶಾಖಾ‌ಮಠದ ಶ್ರೀ ಗುಣನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣಗೊಳಿಸಿ, ಕಾರ್ಯಕ್ರಮ ಉದ್ದೇಶಿಸಿ ನಿಖಿಲ್ ಮಾತನಾಡಿದರು.

- Advertisement - 

ನಾಡಪ್ರಭು ಕೆಂಪೇಗೌಡರು ಕರ್ನಾಟಕ ಮಾತ್ರವಲ್ಲದೇ ಭಾರತದ ಆಸ್ತಿ. 500 ವರ್ಷಗಳ ಹಿಂದೆಯೇ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಇಂದಿಗೂ ಚರ್ಚೆಯಲ್ಲಿವೇ, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಜಲಸಂಪನ್ಮೂಲಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಕೆಂಪೇಗೌಡರ ಸಾಧನೆ ಹಾಗೂ ಕೊಡುಗೆಯನ್ನು ಸ್ಮರಿಸಲಾಯಿತು.

- Advertisement - 

ಇದೇ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ “ಸಿಟಿ ಮೊಬಿಲಿಟಿ ಆ್ಯಂಡ್ ಸಸ್ಟೆನೆಬಲ್” ಇನಸ್ಟಿಟ್ಯೂಟ್ ತೆರೆಯುವ ಮೂಲಕ ಯುವ ಜನತೆ ಉತ್ತಮ ನಗರವನ್ನು ನಿರ್ಮಾಣ ಮಾಡುವ ಕೌಶಲಗಳನ್ನು ಕಲಿಸುವ ಕೆಲಸ ಮಾಡುವಂತೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ‌ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದ‌ನಾಥ ಮಹಾಸ್ವಾಮಿಗಳ ಪಾದಕಮಲಗಳಲ್ಲಿ ವಿನಂತಿಸಿ, ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ಸರ್ವರಿಗೂ ಧನ್ಯವಾದಗಳನ್ನು ನಿಖಿಲ್ ಅರ್ಪಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಮೂಡಿಗೇರೆ ಶಾಸಕಿ ನಯನಾ, ಮೋಟಮ್ಮ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಸಂಘದ ನಿರ್ದೇಶಕ ಐ.ಎ. ಪೂರ್ಣೇಶ್, ಪ್ರಮುಖರಾದ ಹೆಚ್.ಎಸ್. ಕವೀಶ್,  ಸಂಪತ್ ಹೆಡದಾಳು, ಗ್ರಾಮ ಪಂಚಾಯತಿ ಅಧ್ಯಕ್ಷೆ ಜುಬೇಧ ಹಸೈನಾರ್, ಪ್ರತಿಮೆಯ ಶಿಲ್ಪಿ ವಿಜಯ ಬಿಡದಿ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳುಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಗ್ರಾಮದ ಗುರುಹಿರಿಯರು, ತಾಯಂದಿರು ಉಪಸ್ಥಿತರಿದ್ದರು.

Share This Article
error: Content is protected !!
";