ವಿವಾದಿತ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿ ತೆರವು ಗೊಳಿಸಲು ಒತ್ತಾಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಜಗದೀಶ್ ವೃತ್ತದ ಸಮೀಪದಲ್ಲಿ ರಸ್ತೆಯ ಪಕ್ಕದಲ್ಲಿ  ಕಂಪೌಂಡ್ ಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿಕೊಂಡು ವ್ಯಾಪಾರ ಸಾಗಿಸುತ್ತಿದ್ದ ಅಂಗಡಿಗಳನ್ನು  ಏಕಾಏಕಿ ಯಾವುದೇ ನೋಟಿಸ್ ನೀಡದೆ  ತೆರವು ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನೆನ್ನೆ(ಫೆ. 3) ಕೆಲ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿದ್ದರು ಇಂದು(ಫೆ.4)  ಜಮೀನು(ಸರ್ವೇ ನಂಬರ್ 143/1 )  ಕುರಿತು ನ್ಯಾಯಾಲಯದಲ್ಲಿ ದಾವೆ ಹೊಡಿರುವ ರೂಪ
ನಂದಿನಿ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಈ ಕುರಿತು ಮಾಹಿತಿ ನೀಡಿದರು.

ದೂರುದಾರರಾದ ರೂಪ ಮಾತನಾಡಿ (ಸರ್ವೇ ನಂಬರ್ 143/1 ) ಈ ಜಮೀನು ನಮ್ಮ ಪೂರ್ವಜರ ಅಸ್ತಿಯಾಗಿದ್ದು  ಇಂದಿಗೂ ಈ ಜಮೀನನ್ನು ಬೇರೆಯವರು ಅನುಭವಿಸುತ್ತಿದ್ದಾರೆ. ಈಗ ನಾವುಗಳು ನ್ಯಾಯಾಲಯದಲ್ಲಿ ದಾವೆ ಹೂಡಿ ಸ್ಟೇಟಸ್ ಕ್ಯೂ ಆದೇಶ ಪಡೆದಿದ್ದೇವೆ. ಆದರೆ ಈ ಸರ್ವೇ ನಂಬರ್ ನಲ್ಲಿ ಹಲವಾರು ಅಂಗಡಿಗಳು ನಿರ್ಮಾಣವಾಗಿದ್ದು  ಹಲವು ವರ್ಷಗಳಿಂದ ವ್ಯಾಪಾರ ವಹಿವಾಟು ನೆಡೆಸಿಕೊಂಡು ಬರುತ್ತಿವೆ ಅಂಗಡಿಗಳು ಸರ್ವೇ ನಂಬರ್ ನಲ್ಲಿ ಇರುವ ಕಾರಣ ತೆರವುಗೊಳಿಸುವಂತೆ  ಹಲವು ಬಾರಿ ಮನವಿ ಮಾಡಿದ್ದೇವೆ ಅಲ್ಲದೇ ನಗರಸಭಾ ವತಿಯಿಂದ ನೋಟಿಸ್ ಕೂಡ ನೀಡಿದ್ದು, ನಮ್ಮ ಜಮೀನು ನಮಗೆ ಬಿಟ್ಟು ಕೊಡಲು ಈ ಮೂಲಕ ಮನವಿ ಮಾಡುತ್ತೇವೆ ಎಂದರು.

- Advertisement - 

ಕುಟುಂಬದ ಸದಸ್ಯರಾದ ನಂದಿನಿ ಮಾತನಾಡಿ  ನಾವು ಕಳೆದ ಮೂರ್ನಾಲ್ಕು  ತಿಂಗಳುಗಳ ಹಿಂದೆಯೇ ನಗರಸಭೆ ಸಹಯೋಗದೊಂದಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರಿ ಅಂಗಡಿ ಮಾಲೀಕರಿಗೆ  ನೋಟಿಸ್ ನೀಡಿದ್ದೇವೆ . ಆದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ನೂತನವಾಗಿ ಹಲವಾರು ಅಂಗಡಿಗಳನ್ನು  ನಮ್ಮ ಸರ್ವೇ ನಂಬರ್ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ರಸ್ತೆಯ ಫುಟ್ಪಾತ್ ಗೂ ನಮಗೂ ಸಂಬಂಧವಿಲ್ಲ  ಆದರೆ ನಮ್ಮ ಜಾಗದಲ್ಲಿ ಯಾವುದೇ ಅಂಗಡಿಗಳನ್ನು ಇಡಲು ನಾವು ಬಿಡುವುದಿಲ್ಲ ಎಂದರು.

 ನ್ಯಾಯಾಲಯದಲ್ಲಿ ನಮಗೆ ಸ್ಟೇಟಸ್ ಕ್ಯೂ ಆದೇಶವಾಗಿದ್ದು  ಜಮೀನಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯಬಾರದು ಆದರೆ ದಿನೇ ದಿನೇ  ಹೊಸ  ಅಂಗಡಿಗಳು  ನಮ್ಮ ಜಾಗದಲ್ಲಿ ಸೇರ್ಪಡೆಯಾಗುತ್ತಿವೆ  ಹಾಗಾಗಿ ಎಲ್ಲಾ ಅಂಗಡಿಗಳ ತೆರವುಗೊಳಿಸಲು ನಾವು ಮುಂದಾಗಿದ್ದೇವೆ ಎಂದರು.

- Advertisement - 

 ಈ ವೇಳೆ ಕುಪ್ಪಮ್ಮ,ಶಾಂತಮ್ಮ, ಮುನಿಯಪ್ಪ, ಪ್ರಭು,  ವಾಸು, ನಂದಿನಿ, ಹರೀಶ್, ರೂಪ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು.

 

Share This Article
error: Content is protected !!
";