ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳಿಂದ  ಯುಪಿಐ ಸ್ಕ್ಯಾಮ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕೆಲ ಸಿಬ್ಬಂದಿ UPI ಮೂಲಕ 23 ಲಕ್ಷ ರೂಪಾಯಿ ದೋಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ರೋಗಿಗಳ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನ್​ಗೆ ಅವಕಾಶ ನೀಡಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸ್ಪತ್ರೆ ಸಿಬ್ಬಂದಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿ ತಮ್ಮ ಖಾತೆಗೆ ರೋಗಿಗಳ ಹಣ ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

- Advertisement - 

 ಲ್ಯಾಬ್, ಒಪಿಡಿ, ಎಕ್ಸ್​ರೇ ವಿಭಾಗದಲ್ಲಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿಕೊಂಡು 23 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ್ದಾರೆ. ಬಳಿಕ ಯುಪಿಐ ಸ್ಕ್ಯಾನರ್ ವಿಚಾರದಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ಅಧೀಕ್ಷಕ ದೀಪಕ್ ಅವರು ಸಮಿತಿ ರಚಿಸಿ ತನಿಖೆ ನಡೆಸಿದಾಗ ಸಿಬ್ಬಂದಿಯ ಕಳ್ಳಾಟ ಬಯಲಾಗಿದ್ದು, ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

 

- Advertisement - 

 

Share This Article
error: Content is protected !!
";