ಕೇಂದ್ರ ಸರ್ಕಾರದ ಜನ ವಿರೋದಿ ಮಸೂದೆ ವಿರೋಧಿಸಿ ಫೆ-12ರಂದು ಮುಷ್ಕರ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ಜನವಿರೋಧಿ ಮಸೂದೆ ಗಳನ್ನು ರದ್ದುಪಡಿಸುವಂತೆ ಅಗ್ರಹಿಸಿ ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಈ ಮುಷ್ಕರವನ್ನು ಉತ್ಪಾದನೆ  ಸೇವೆ ಸ್ಥಗಿತಗೊಳಿಸುವ ಮೂಲಕ ಕಾರ್ಮಿಕರು
, ರೈತರು, ದಲಿತರುಯುವ ಸಮುದಾಯ ಮಹಿಳಾ ಸಂಘಟನೆಗಳು ಹಾಗೂ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ಗೆ ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕದ ಪ್ರಮುಖರು ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮುಖಂಡರು ಮಾತನಾಡಿ ಕೇಂದ್ರ ಸರ್ಕಾರವು ದೇಶದ ಕಾರ್ಮಿಕರ ವಿರುದ್ಧ  4 ಕಾರ್ಮಿಕ ಮಸೂದೆ ಗಳನ್ನು ಜಾರಿಗೊಳಿಸಿದ್ದು ಕಾರ್ಮಿಕರಿಗೆ ಮಾರಕವಾದ ಈ ಮಸೂದೆಗಳನ್ನು  ರದ್ದುಗೊಳಿಸಬೇಕು.ಬಡವರ ಜೀವನಾಧಾರವಾಗಿರುವ ನರೇಗಾ ಯೋಜನೆಯನ್ನು ಪುನ‌ರ್ ಸ್ಥಾಪಿಸಿ  ಜಿ ರಾಮ್  ಜಿ ಕಾಯ್ದೆ ಹಾಗೂ  ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾರ್ಮಿಕರು ಮುಂದಾಗಿದ್ದೇವೆ ಎಂದರು.

- Advertisement - 

ಸಿ. ಐ. ಟಿ. ಯು.ಮುಖಂಡರಾದ ವೆಂಕಟೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.ದೇಶದ ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವು ಬದಲಾಗಬೇಕು. ರೈತರಿಗೆ ಮಾರಕವಾಗಿರುವ ಬೀಜ ಮಸೂದೆ ಕಾಯ್ದೆಯನ್ನು  ಹಿಂಪಡೆಯಬೇಕು. ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ

ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್ನನ್ನು ವಾಪಸ್ಸು ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದರು.

- Advertisement - 

ಫೆಬ್ರವರಿ 12 ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಎಲ್ಲಾ ರೈತ ಸಂಘಗಳು, ಕೂಲಿಕಾರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು ಸೇರಿ ಮುಷ್ಕರ ನಡೆಸಲಾಗುತ್ತಿದೆ. ಅಂದು ಎಲ್ಲಾ ವಿಭಾಗದ ಜನತೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕು ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ  ಪ್ರಾಂತ ರೈತ ಸಂಘದ ಮುಖಂಡ ಆರ್ ಚಂದ್ರು ತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ್ ನಾಯಕ್, ಪ್ರಜಾ ವಿಮೋಚನಾ ಚಳುವಳಿ ಮುಖಂಡ ಗೂಳ್ಯ ಹನುಮಣ್ಣ, ಸಿಐಟಿಯು ಜಿಲ್ಲಾ ಖಜಾಂಚಿ ಎಚ್ಎನ್ ಮೋಹನ್ ಬಾಬು,ಕೆಐಇಇಎಫ್ ಕಾರ್ಮಿಕ ಸಂಘದ ಮುಖಂಡ ಪ್ರಭಾಕರ್ ಎಂಜೆ,ಶಿವಕುಮಾರ್ ಹೆಚ್,ಎಐಟಿಯುಸಿ ಮುಖಂಡರಾದ ಒಟ್ಟು ಬಿಲ್ಜ್,ಮಂಜುನಾಥ್ ಎನ್, ಓಮಿನಿ,ಎಚ್ ಎಲ್ ಹೇಮಂತ್ ಕುಮಾರ್,ಎ ಐ ಯು ಟಿ ಯು ಸಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್,ಕರ್ನಾಟಕ ರಾಜ್ಯ ರೈತ ಸಂಘದ ಮುತ್ತೇಗೌಡ,ನಾರಾಯಣಪ್ಪ,ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಂಜಪ್ಪ,ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಎಚ್ಎಸ್ ವೆಂಕಟೇಶ್, ಬಿರ್ಲಾ ಸೂಪರ್ ಕಾರ್ಮಿಕ ಸಂಘದ ಮುಖಂಡ ರೇಣುಕಾ ರಾಧ್ಯ,

ಅನಿಲ್ ಗುಪ್ತ, ಬೀರೇಂದ್ರ ಗುಪ್ತ,ಎ ಆರ್ ಡಿ ಯು ಆಟೋ ಚಾಲಕರ ಸಂಘದ ಅಧ್ಯಕ್ಷ ಸಾಧಿಕ್ ಪಾಷಾ, ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್,ಡಾ. ರಾಜಕುಮಾರ್ ಕನ್ನಡ ಅಭಿಮಾನಿಗಳ  ಸಂಘದ ಆರ್ ಎಂ ಮಹದೇವಯ್ಯ,ಡಿಎಸ್ಎಸ್ ಸಂಚಾಲಕರಾದ ಸುರೇಶ್,ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಸಿ.ಹೆಚ್.ರಾಮಕೃಷ್ಣಯ್ಯ, ಸದಾಶಿವಪ್ಪ,ಇಂಡೇನ ಕಾರ್ಮಿಕ ಸಂಘದ ವಿನಯ್ ಕೆ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

Share This Article
error: Content is protected !!
";