ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ನಿಜವಾದ, ಅಸಲಿ PayCM ಸರ್ಕಾರ ಎನ್ನುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ಲೂಟಿಯೇ ಸಾಕ್ಷಿ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಅಧಿಕಾರಿಗಳು ಸೇರಿದಂತೆ ಇಡೀ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಇನ್ನು ಸಾಮಾನ್ಯ ಸಿಬ್ಬಂದಿಗಳು ಸುಮ್ಮನಿರುತ್ತಾರೆಯೇ? ಎಂದು ಅವರು ವ್ಯಂಗ್ಯವಾಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅಧಿಕೃತ UPI ಸ್ಕ್ಯಾನರ್ ತೆಗೆದು ಹಾಕಿ, ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ UPI scanner ಅಳವಡಿಸಿ ಬಡರೋಗಿಗಳಿಂದ 23 ಲಕ್ಷ ರೂಪಾಯಿ ಲೂಟಿ ಮಾಡಿರುವ ಆಸ್ಪತ್ರೆಯ ಸಿಬ್ಬಂದಿಗಳು, ಕಾಂಗ್ರೆಸ್ ಸರ್ಕಾರ ನಿಜವಾದ, ಅಸಲಿ PayCM ಸರ್ಕಾರ ಎಂದು ಸಾಬೀತು ಮಾಡಿದ್ದಾರೆ.
ಮೂರು ಬಿಟ್ಟವರು ಊರಿಗೇ ದೊಡ್ಡವರು ಎನ್ನುವಂತೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗಲಿದೆ ಎಂದು ಖಾತ್ರಿ ಆಗಿರುವ ಸಚಿವರು, ಶಾಸಕರು ನಿರ್ಲಜ್ಜವಾಗಿ ಎಗ್ಗಿಲ್ಲದೆ ಸಿಕ್ಕಸಿಕ್ಕ ಕಡೆ ಲೂಟಿ ಹೊಡೆಯುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.

