“ಡ್ರಗ್ಸ್‌ ಕ್ಯಾಪಿಟಲ್‌” ಆಗಿ ಮಾರ್ಪಟ್ಟ ಕಾಂಗ್ರೆಸ್ ಅರಾಜಕತೆಯ ಆಡಳಿತ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಅರಾಜಕತೆಯಲ್ಲಿ ಕರ್ನಾಟಕ “ಡ್ರಗ್ಸ್‌ ಕ್ಯಾಪಿಟಲ್‌” ಆಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಕರ್ನಾಟಕದಲ್ಲಿ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ದಾಖಲಾದ ಪ್ರಕರಣಗಳು ತೀವ್ರ ಏರಿಕೆಯಾಗಿರುವುದೇ ಸಾಕ್ಷಿ.

- Advertisement - 

ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಡ್ರಗ್ಸ್‌ ತಯಾರಿಕಾ ಫ್ಯಾಕ್ಟರಿಗಳ ಮೇಲೆ ಮುಂಬೈ, ದೆಹಲಿ ಪೊಲೀಸರ ದಾಳಿ ರಾಜ್ಯದ ಮಾನ ಹರಾಜು ಹಾಕಿದೆ. ಈ ಬೆನ್ನಲ್ಲೇ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ 2025ರಲ್ಲಿ ಮಾದಕ ದ್ರವ್ಯ ಪ್ರಕರಣಗಳು ಶೇ.63ರಷ್ಟು ಹೆಚ್ಚಳದ ವರದಿ ಅತ್ಯಂತ ಆತಂಕ ಹುಟ್ಟಿಸಿದೆ ಎಂದು ಜೆಡಿಎಸ್ ತಿಳಿಸಿದೆ.    

ರಾಜ್ಯದಲ್ಲಿ ಮಾದಕ ದ್ರವ್ಯಗಳ ಮಾರಾಟ ಜಾಸ್ತಿಯಾಗುತ್ತಿದ್ದು, ಯುವಜನತೆ ಡ್ರಗ್ಸ್‌ ಚಟಕ್ಕೆ ಬಲಿಯಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಇನ್ನಾದರೂ ಹೆಚ್ಚೆತ್ತು ಡ್ರಗ್ಸ್‌ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

 

 

Share This Article
error: Content is protected !!
";