ಹರ್ ಘರ್ ಜಲ್’ ಘೋಷಣೆಗೆ ಸನ್ನದ್ಧ: ವಿ.ಡಬ್ಲ್ಯೂ.ಎಸ್.ಸಿ ಸದಸ್ಯರಿಗೆ ತರಬೇತಿ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಕಲ್ಪಿಸುವ
ಜಲ ಜೀವನ ಮಿಷನ್ಯೋಜನೆಯಡಿ, ಗ್ರಾಮಗಳನ್ನು ಹರ್ ಘರ್ ಜಲ್’ (ಮನೆ ಮನೆ ಗಂಗೆ) ಎಂದು ಘೋಷಿಸಲು ಪೂರಕವಾಗಿ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಗ್ರಾಮ್ಸ್ಸಂಸ್ಥೆಯ ಸಹಯೋಗದಲ್ಲಿ ಈಚೆಗೆ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (VWSC)  ಸದಸ್ಯರಿಗಾಗಿ ವಿಶೇಷ ತರಬೇತಿ ಮತ್ತು ಅನುಸರಣೆ ಕಾರ್ಯಕ್ರಮ ಆಯೋಜಿಸಿ, ಯೋಜನೆಯ ಸುಸ್ಥಿರ ನಿರ್ವಹಣೆ, ನೀರಿನ ಗುಣಮಟ್ಟದ ತಪಾಸಣೆ ಹಾಗೂ ಸಾರ್ವಜನಿಕ ಸಹಭಾಗಿತ್ವದ ಕುರಿತು ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಯಿತು.

- Advertisement - 

ಪ್ರತಿ ಮನೆಗೂ ನೀರು ತಲುಪುವುದಷ್ಟೇ ಅಲ್ಲದೆ, ಅದರ ನಿರ್ವಹಣೆಯೂ ಸಮರ್ಪಕವಾಗಿರಬೇಕು. ಗ್ರಾಮಸ್ಥರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ, ಅಧಿಕೃತವಾಗಿ ಗ್ರಾಮಗಳನ್ನು ಯೋಜನೆಯಡಿ ಘೋಷಿಸಲು ಈ ತರಬೇತಿ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಆಯಾ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೀರುಘಂಟಿಗಳು ಉಪಸ್ಥಿತರಿದ್ದರು.

- Advertisement - 

ಫೋಟೋ ವಿವರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ತರಬೇತಿ ನಡೆಯಿತು.

 

Share This Article
error: Content is protected !!
";