ಎಸ್‌ಐಆರ್ ಮ್ಯಾಪಿಂಗ್ ಶಿಫ್ಟಿಂಗ್ ಮಾಡುವಂತೆ ಕಾಂಗ್ರೆಸ್ ಮನವಿ 

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್. ಮ್ಯಾಪಿಂಗ್‌ನ್ನು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ನಿಗಧಿಪಡಿಸಿದ ಸಮಯದಲ್ಲಿ ಬಿಎಲ್‌ಓ ಗಳ ಮುಖಾಂತರ ವರ್ಗಾವಣೆ ಮಾಡಿಸಿದ್ದು
, ಹಳೆ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆಗಳು ರದ್ದಾಗಿವೆ. ಮತ್ತು ಬದಲಾವಣೆಯಾಗಿರುವ ಹೊಸ ಮತದಾರರ ಪಟ್ಟಿಯಲ್ಲಿ(ವಾರ್ಡ್ ಶಿಫ್ಟಿಂಗ್) ಆಗಿವೆ. ಆದರೂ ಮ್ಯಾಪಿಂಗ್ ಕ್ರಮ ಸಂಖ್ಯೆಯಲ್ಲಿ ಶಿಫ್ಟಿಂಗ್ ಆಗಿರುವ ಮತದಾರರ ಗುರುತಿನ ಚೀಟಿಯ ವಿವರ ಮತ್ತು ಮ್ಯಾಪಿಂಗ್ ಕ್ರಮ ಸಂಖ್ಯೆ ತೋರಿಸುತ್ತಿಲ್ಲ.

ಈ ಸಂಬಂಧ ಸಾರ್ವಜನಿಕರು ನಗರಸಭೆ, ತಾಲ್ಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಎಡತಾಕಿ ನವೀಕರಣ ಮಾಡಿಕೊಡಲು ಕೋರಿರುವುದರಿಂದ ಮ್ಯಾಪಿಂಗ್ ಅಪ್‌ಡೇಟ್ ಮಾಡಲು ಎಲ್ಲಾ ಬಿಎಲ್‌ಓ ರವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಚಿತ್ರದುರ್ಗ ಬ್ಲಾಕ್ ಕಾಂಗ್ರೆಸ್ ಕಮಿಟಿ ತಾಲ್ಲೂಕು ಪ್ರಚಾರ ಸಮಿತಿಯಿಂದ ಅಪರ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

- Advertisement - 

ಚಿತ್ರದುರ್ಗ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಡಿ.ಹಸನ್‌ತಾಹಿರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ

ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಮೆಹಬೂಬ್‌ಖಾನ್, ಸೈಯದ್ ಮುನಾವರ್, ನಾಗರಾಜ್ ಪೈಲೆಟ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - 

Share This Article
error: Content is protected !!
";