ಬಾಷ್ ಮತ್ತು ಕರ್ನಾಟಕ ಬಲಿಷ್ಠ ಪಾಲುದಾರಿಕೆ ಮುಂದುವರಿಕೆ-ಎಂಬಿಪಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂದಿನ ತಲೆಮಾರಿನ ಮೊಬಿಲಿಟಿ ಕ್ರಾಂತಿಗೆ ಬಾಷ್-ಕರ್ನಾಟಕ ಬಲಿಷ್ಠ ಪಾಲುದಾರಿಕೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು. ಬಾಷ್ ಸಂಸ್ಥೆಯ ಗ್ಲೋಬಲ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಸದಸ್ಯ ಸ್ಟೆಫಾನ್ ಗ್ರೋಶ್ ಅವರೊಂದಿಗೆ ಕರ್ನಾಟಕದಲ್ಲಿ ಬಾಷ್ ನ ತಯಾರಿಕಾ ಹಾಗೂ ಸಂಶೋಧನೆ-ಅಭಿವೃದ್ಧಿ ಕೇಂದ್ರ ವಿಸ್ತರಣೆಯ ಕುರಿತು ಸುದೀರ್ಘವಾದ ಚರ್ಚೆ ನಡೆಸಿದೆವು ಎಂದು ಸಚಿವರು ತಿಳಿಸಿದರು.

ಕಳೆದ ವರ್ಷ ಜರುಗಿದ #GIM2025 MoU ನಂತರ ಹೂಡಿಕೆಗಳನ್ನು ಇನ್ನಷ್ಟು ವಿಸ್ತರಿಸುವುದು, ಪೂರೈಕೆದಾರರ ಪರಿಸರ ವ್ಯವಸ್ಥೆ ಬಲಪಡಿಸುವುದು, ಬೆಂಗಳೂರು ಮತ್ತು ರಾಮನಗರದಲ್ಲಿರುವ ಬಾಷ್ ನ ವಿಶ್ವದರ್ಜೆಯ ಸೌಲಭ್ಯಗಳನ್ನು ಆಧಾರವಾಗಿರಿಸಿಕೊಂಡು, EV ಘಟಕಗಳು, ಪವರ್ ಎಲೆಕ್ಟ್ರಾನಿಕ್ಸ್, ಡ್ರೈವ್ ವ್ಯವಸ್ಥೆಗಳು ಮತ್ತು ಹೈಡ್ರೋಜನ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಬಾಷ್ ನ ಪ್ರಮುಖ ಸ್ಕೇಲ್ ಬೇಸ್ಆಗಿ ರೂಪಿಸುವ ಕುರಿತು ವಿವರವಾಗಿ ಚರ್ಚಿಸಿದೆವು ಎಂದು ಸಚಿವರು ತಿಳಿಸಿದರು.

- Advertisement - 

ನವೀನ ತಂತ್ರಜ್ಞಾನ ಹಾಗೂ ಸುಸ್ಥಿರ ಮೊಬಿಲಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಅಗ್ರಸ್ಥಾನದಲ್ಲಿರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

 

- Advertisement - 

Share This Article
error: Content is protected !!
";