ರಸ್ತೆ ಅಪಘಾತಗಳಲ್ಲಿ ನೊಂದ ಕುಟುಂಬಗಳು ಸುಲಭವಾಗಿ ವಿಮೆ ಪಡೆಯಲು ಇ-ಡಾರ್ ಯೋಜನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾರಿಗೆ, ಗೃಹ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ-2026’ರ ಸಮಾರೋಪ ಮತ್ತು ಇ-ಡಾರ್ಯೋಜನೆಯ ಅನುಷ್ಠಾನ ಸಮಾರಂಭದಲ್ಲಿ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.

ರಸ್ತೆ ಅಪಘಾತಗಳಲ್ಲಿ ನೊಂದ ಕುಟುಂಬಗಳು ಇನ್ಶುರೆನ್ಸ್ (ವಿಮೆ) ಹಣ ಪಡೆಯಲು ಹರಸಾಹಸ ಪಡುವುದನ್ನು ತಪ್ಪಿಸಲು ಇದೊಂದು ಶಾಶ್ವತ ಪರಿಹಾರವಾಗಿದೆ.
ಇನ್ನು ಮುಂದೆ ಪೊಲೀಸ್
, ಸಾರಿಗೆ ಮತ್ತು ಆರೋಗ್ಯ ಇಲಾಖೆಯ ಮಾಹಿತಿಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಿಗಲಿವೆ. ಇದರಿಂದ ವಿಮಾ ಕಂಪನಿಗಳು ತ್ವರಿತವಾಗಿ ಪರಿಹಾರ ನೀಡಲು ಸಾಧ್ಯವಾಗುತ್ತದೆ.

- Advertisement - 

ಇದೇ ವೇಳೆ, ಮಹಿಳೆಯರು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರ ಡಿಸ್ಪ್ಲೇ ಕಾರ್ಡ್ಗಳನ್ನು ಸಹ ಬಿಡುಗಡೆ ಮಾಡಲಾಯಿತು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ಸಾರಿಗೆ ಆಯುಕ್ತ ಯೋಗೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

- Advertisement - 

 

 

Share This Article
error: Content is protected !!
";