ಯತೀಂದ್ರರೇ ನಮ್ಮ ಹೈಕಮಾಂಡ್, ಅವರ ಮಾತನ್ನೇ ಸ್ವೀಕರಿಸೋಣ-ಡಿಸಿಎಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಮುಖ್ಯಮಂತ್ರಿ ಪುತ್ರ, ವಿಪ ಸದಸ್ಯ ಡಾ.ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನನಗೆ ಇಷ್ಟವಿಲ್ಲ. ದೆಹಲಿಯವರು ಪ್ರತಿಕ್ರಿಯೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ, ನಾಯಕತ್ವ ಬದಲಾವಣೆ ಮಾಡಲ್ಲ ಎಂದು ಹೈಕಮಾಂಡ್ ಸಿಗ್ನಲ್ ಕೊಟ್ಟಿದೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

- Advertisement - 

ಯತೀಂದ್ರರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಅವರ ಮಾತನ್ನೇ ಗೌರವದಿಂದ ಸ್ವೀಕರಿಸೋಣ ಎಂದು ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದರು.

ಪುತ್ತೂರು ಕಾಂಗ್ರೆಸ್ ಕಚೇರಿ ಶಿಲಾನ್ಯಾಸದಲ್ಲಿ ಮುಸ್ಲಿಂ ಮುಖಂಡರ ಹೆಸರು ಕೈಬಿಟ್ಟ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಕಾಂಗ್ರೆಸ್ ಜಾತಿ ಮೇಲಲ್ಲ ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಜಾತಿ, ಧರ್ಮಗಳೂ ಬೇಕು. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅಸೂಯೆ ಇರುವವರು ಈ ರೀತಿ ಮಾತನಾಡುತ್ತಾರೆ ಎಂದು ಡಿಸಿಎಂ ಟಾಂಗ್ ನೀಡಿದರು.

- Advertisement - 

ಪಕ್ಷದ 100 ಕಚೇರಿಗಳಿಗೆ ಚಾಲನೆ:
ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಮಾರ್ಚ್‌ನಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ
100 ಕಚೇರಿಗಳಿಗೆ ಭೂಮಿ ಪೂಜೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಮುಂಬರುವ ಮಾರ್ಚ್ 10ಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತವೆ. ಮಾರ್ಚ್ 10 ನನ್ನ ರಾಜಕೀಯ ಜೀವನದಲ್ಲಿ ವಿಶೇಷ ದಿನ ಎಂದ ಅವರು, ಆ ನೆನಪಿನಲ್ಲಿ ಈ ಎಲ್ಲಾ ಭೂಮಿ ಪೂಜೆ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಯತೀಂದ್ರರ ಹೇಳಿಕೆ?:
ಮೈಸೂರಲ್ಲಿ ಶುಕ್ರವಾರ ಡಾ.ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯನವರೇ
5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಯಾವುದೇ ಚರ್ಚೆ ಆಗುತ್ತಿಲ್ಲ. ಕೇವಲ ಮಾಧ್ಯಮದಲ್ಲಿ ಮಾತ್ರ ಚರ್ಚೆ ಆಗುತ್ತಿದೆ.

ಸಿಎಂ ಬದಲಾವಣೆ ವಿಚಾರ ಈಗಾಗಲೇ ಸೆಟ್ಲ್ ಆಗಿದೆ. ಸಿಎಂ ಅವರನ್ನು ಕೆಳಗಿಳಿಸಿ ಎಂದು ಯಾರೂ ಹೇಳಿಲ್ಲ. ಜತೆಗೆ ಕೆಲವರ ಬೇಡಿಕೆಗೂ ಹೈಕಮಾಂಡ್ ಯಾವುದೇ ಮನ್ನಣೆ ಕೊಟ್ಟಿಲ್ಲ. ಹೈಕಮಾಂಡ್ ನೇರವಾಗಿ ಹೇಳದೇ ಇರಬಹುದು, ಆದರೆ ಸದ್ಯಕ್ಕೆ ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಸಿಗ್ನಲ್ ಕೊಟ್ಟಿದೆ ಎಂದು ಡಾ.ಯತೀಂದ್ರ ಹೇಳಿಕೆ ನೀಡಿದ್ದರು.

 

Share This Article
error: Content is protected !!
";