ಮೆಕ್ಕೆಜೋಳ ಖರೀದಿ: ನೋಂದಣಿ ಅವಧಿ ಫೆ. 13ರವರೆಗೆ ವಿಸ್ತರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಮಾರಾಟ ಮಾಡಲು ರೈತರ ನೋಂದಣಿ ಅವಧಿಯನ್ನು ಇದೇ ಫೆಬ್ರವರಿ 13ರವರೆಗೆ ಹಾಗೂ ಯುಎಂಪಿ ವೇದಿಕೆಯಡಿ ವಹಿವಾಟು ಅಂತ್ಯಗೊಳಿಸುವ ದಿನಾಂಕವನ್ನು ಫೆ.21 ರವರೆಗೆ ಪುನರ್ ನಿಗಧಿಪಡಿಸಿ ಆದೇಶಿಸಿದೆ.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಸಂಬಂಧ ಈ ಹಿಂದೆ ಜಿಲ್ಲಾವಾರು ನಿಗದಿಪಡಿಸಲಾಗಿದ್ದ ಮಿತಿಯನ್ನು ಹಿಂಪಡೆಯಲಾಗಿದೆ.

- Advertisement - 

ಆಯಾ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರುಗಳಿಗೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಪ್ರಥಮ ಆದ್ಯತೆ ನೀಡುವ ಮೇರೆಗೆ ಮೆಕ್ಕೆಜೋಳ ಉತ್ಪನ್ನದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ರಾಜ್ಯ ವ್ಯಾಪ್ತಿಗೆ ಗರಿಷ್ಟ ಪ್ರಮಾಣವನ್ನು 40 ಲಕ್ಷ ಕ್ವಿಂಟಾಲ್‍ಗೆ ನಿಗಧಿಪಡಿಸಿ ಆದೇಶಿಸಿದೆ.

ಈ ಯೋಜನೆಯಡಿ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿ ಬೆಲೆ ವ್ಯತ್ಯಾಸದ ಸೌಲಭ್ಯ ಪಡೆಯುವಂತೆ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

- Advertisement - 

 

 

Share This Article
error: Content is protected !!
";