ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2024 ಮತ್ತು 2025ನೇ ಸಾಲಿನ ‘ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ’ಗಾಗಿ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಿದೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲೇಖಕರು ಮತ್ತು ಪ್ರಕಾಶಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು. 2024ರ ಜನವರಿಯಿಂದ ಡಿಸೆಂಬರ್‍ವರೆಗೆ ಹಾಗೂ 2025ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಕಟಗೊಂಡಿರುವ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ ಹಾಗೂ ಮಕ್ಕಳ ಸಾಹಿತ್ಯ ವಿಮರ್ಶೆ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಆಸಕ್ತರು ತಮ್ಮ ಕೃತಿಯ ನಾಲ್ಕು ಪ್ರತಿಗಳನ್ನು ಲೇಖಕರ ಸ್ವ-ವಿವರಗಳನ್ನೊಳಗೊಂಡ ಮನವಿಯೊಂದಿಗೆ ಸಲ್ಲಿಸಬೇಕು. ಪುಸ್ತಕವು ಯಾವ ವರ್ಷದಲ್ಲಿ ಪ್ರಕಟಗೊಂಡಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.
ಪ್ರಶಸ್ತಿಗಾಗಿ ಪರಿಗಣಿಸಲು ಪುಸ್ತಕಗಳನ್ನು ಇದೇ ಫೆಬ್ರವರಿ 20ರ ಒಳಗಾಗಿ ‘ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ, ಧಾರವಾಡ- 580004’ ಈ ವಿಳಾಸಕ್ಕೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8050392209, 7204396275 ಅಥವಾ 94489 81944 ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

