ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಂಎಸ್ಐಎಲ್ ಚಿಟ್ಸ್ ಫಂಡ್ ಇತಿಹಾಸದಲ್ಲಿ ನೂತನ ಹೆಜ್ಜೆ ಹೊಸ ಸಾಫ್ಟ್ವೇರ್ ಹಾಗೂ ಮೊಬೈಲ್ ಆಪ್ ಲೋಕಾರ್ಪಣೆ! ಮಾಡಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಹೂಡಿಕೆದಾರರಿಗೆ ಸುರಕ್ಷತೆ, ಉತ್ತಮ ಸೇವೆ, ಹೆಚ್ಚಿನ ಲಾಭ ತಂದುಕೊಡುವ ಜತೆಗೆ ಮುಂದಿನ 5 ವರ್ಷಗಳಲ್ಲಿ ವಹಿವಾಟನ್ನು 5,000 ಕೋಟಿಗೆ ಏರಿಸುವ ಗುರಿಯನ್ನು MSIL ಚಿಟ್ಸ್ ಹೊಂದಿದೆ. ಈ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದಲೂ ಎಂಎಸ್ಐಎಲ್ ಗೆ ಕಾಯಕಲ್ಪ ನೀಡುತ್ತಿದ್ದು, ಈ ದಿನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿದರು ಎಂದು ಪಾಟೀಲ್ ತಿಳಿಸಿದರು.
ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿ, ಎಐ ತಂತ್ರಜ್ಞಾನ, ಹಾಗೂ ಮೊಬೈಲ್ ಆಪ್ ಮೂಲಕ ರಾಜ್ಯವ್ಯಾಪಿ ವ್ಯಾಪಕವಾಗಿ ಪಸರಿಸಲಿದೆ ಎಂಎಸ್ಐಎಲ್ ಚಿಟ್ಸ್!
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಂಎಸ್ಐಎಲ್ ಅಧ್ಯಕ್ಷರಾದ ಶ್ರೀ ಪುಟ್ಟರಂಗ ಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

