ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ನಾಗರಾಜು ಕೆ.ಟಿ. ನೆಲ್ಲಿಕಟ್ಟೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಟ್ರಸ್ಟ್‌ನ ಅಧ್ಯಕ್ಷ ಟಿ.ನರಸಿಂಹಮೂರ್ತಿ ರಾಜಿನಾಮೆ ನೀಡಿದ ಕಾರಣ ದೇವಸ್ಥಾನದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆ.ಟಿ.ನಾಗರಾಜ್ ನೆಲ್ಲಿಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜು (ಬೇತೂರು) ಇವರುಗಳನ್ನು ಆಯ್ಕೆ ಮಾಡಲಾಯಿತು.
ತುರ್ತು ಸಭೆಯಲ್ಲಿ ಟಿ.ನರಸಿಂಹಮೂರ್ತಿ, ರವಿಕುಮಾರ್, ನಾಗರಾಜು, ಈರಣ್ಣ ಹಾಗೂ ಕಟ್ಟೆಮನೆ ಅಣ್ಣ-ತಮ್ಮಂದಿರು ಹಾಜರಿದ್ದರು.

