ದನಗಳ ಜಾತ್ರೆಯಲ್ಲಿ 18 ಲಕ್ಷಕ್ಕೆ ಮಾರಾಟವಾದ ‘ಹಳ್ಳಿಕಾರ್​​​​’ ತಳಿಯ ಹೋರಿಗಳು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷ ನಡೆಯುವ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್​​​​ತಳಿಯ ಹೋರಿಗಳು ನಾಲ್ಕು ಲಕ್ಷ ರೂಪಾಯಿಂದ 18 ಲಕ್ಷ ರೂಪಾಯಿವರೆಗೂ ಮಾರಾಟವಾಗುತ್ತಿರುವುದು ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಸಿದ್ದಗಂಗಾ ಮಠದ ಜಾನುವಾರುಗಳ ಜಾತ್ರೆಗೆ ಸಾವಿರಾರು ಹೋರಿಗಳನ್ನು ರೈತರು ತಂದಿದ್ದಾರೆ. ತುಮಕೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳ ರೈತರು ಹಳ್ಳಿಕಾರ್​ ತಳಿಯ ಹೋರಿಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದರು.

- Advertisement - 

ವಿವಿಧ ಕಡೆಗಳಿಂದ ರೈತರು ಕೂಡ ಹೋರಿಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ರೈತ ಮಧು ಎಂಬುವರು ಈ ಕುರಿತು ಮಾತನಾಡಿ, ಈ ಭಾಗದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳನ್ನು ರೈತರು ಬಳಸುತ್ತಾರೆ. ನೆಲಮಂಗಲ, ತುಮಕೂರಿನಲ್ಲಿ ನಮ್ಮ ಹಳ್ಳಿಕಾರ್ ತಳಿಯೇ ಪ್ರಸಿದ್ಧ. ಹೀಗಾಗಿ ಅನೇಕ ವರ್ಷಗಳಿಂದ ನಾವು ಇವುಗಳನ್ನು ಸಾಕಿ ಸಿದ್ದಗಂಗಾ ಜಾತ್ರೆಗೆ ತರುತ್ತೇವೆ. ಈ ಬಾರಿ 8 ಜೊತೆ ಹಳ್ಳಿಕಾರ್ ಹೋರಿಗಳನ್ನು ತೆಗೆದುಕೊಂಡು ಬಂದಿದ್ದೇವೆ.

ಮೂರುವರೆ ಲಕ್ಷ ರೂ. ಮೌಲ್ಯದ ಹೋರಿಗಳು ಸೇರಿದಂತೆ ಸುಮಾರು 18 ಲಕ್ಷ ರೂ.ಗಳವರೆಗಿನ ಹೋರಿಗಳನ್ನು ಕೂಡ ನಾವು ಸಾಕುತ್ತಿದ್ದೇವೆ. ಹೋರಿಗಳನ್ನು ಅವುಗಳ ಹಲ್ಲುಗಳು ಇರುವ ಮಾನದಂಡ ಹಾಗೂ ಅವುಗಳ ಆರೋಗ್ಯಪೂರ್ಣ ಮೈಕಟ್ಟಿನಿಂದ ದರ ನಿಗದಿಪಡಿಸಲಾಗುತ್ತದೆ.

- Advertisement - 

ಕಳೆದ ವರ್ಷ 15 ಲಕ್ಷ ರೂ.ಗಳಿಗೆ ಹಳ್ಳಿಕಾರ್​​ ತಳಿಗಳ ಹೋರಿಗಳನ್ನು ಮಾರಾಟ ಮಾಡಿದ್ದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಮೌಲ್ಯದ ಹೋರಿಗಳು ಎಂದು ಪರಿಗಣಿಸಲಾಗಿತ್ತು. ಪ್ರಸ್ತುತ ದಿನಮಾನಗಳಲ್ಲಿ ಹಳ್ಳಿಕಾರ್​ ತಳಿ ಹೋರಿಗಳ ಸಾಕಾಣಿಕೆ ಕ್ಷೀಣಿಸುತ್ತಿದೆ. ಆದರೆ ಇನ್ನೊಂದೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿರುವುದು ಗಮನಾರ್ಹ ಅಂಶವಾಗಿದೆ” ಎಂದರು.

ನಮ್ಮ ಏರಿಯಾದಲ್ಲಿ ಹೆಚ್ಚಾಗಿ ಹಳ್ಳಿಕಾರ್​ ತಳಿಯೇ ಕಾಣಿಸುತ್ತೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಾಗಡಿ, ಸಿದ್ದಲಿಂಗ ಜಾತ್ರೆ, ಸಪಲ್ಲಮ್ಮ ಜಾತ್ರೆ, ಘಾಟಿ ಜಾತ್ರೆ, ಎಲ್ಲ ಕಡೆಯೂ ಹಳ್ಳಿಕಾರ್​ ತಳಿಗೆ ಬೇಡಿಕೆ ಇದೆ. ಹಿರಿಯರ ಕಾಲದಿಂದಲೂ ಹಳ್ಳಿಕಾರ ಹೋರಿಗಳನ್ನೇ ಬಳಸಲಾಗುತ್ತಿದೆ. ವ್ಯವಸಾಯದ ಆರಂಭಕ್ಕೆ, ಶೋಕಿಗಾಗಿ, ಕೆಲವರು ಶ್ರೀಮಂತರು ಮನೆಯ ಮುಂದೆ ಕಟ್ಟಲು ಈ ಹಳ್ಳಿಕಾರ್​ ತಳಿಯ ಹೋರಿಗಳನ್ನು ಬಳಸುತ್ತಾರೆ. ಈ ಬಾರಿ ಜಾತ್ರೆಗೆ ನಾಟಿ ಹಸು, ಸೀಮೆ ಹಸು, ರಾಸು ಹಸು, ಹಳ್ಳಿಕಾರು ಹೋರಿ ಸೇರಿ ಎಲ್ಲ ತಳಿಯ ಆಕಳುಗಳನ್ನು ತರಲಾಗಿದೆ. ಲೆಕ್ಕ ಹಾಕಲಾಗದಷ್ಟು ಸಾವಿರಾರು ಜೊತೆ ಜಾನುವಾರುಗಳು ಈ ಬಾರಿ ಜಾತ್ರೆ ಬಂದಿವೆ ಎಂದು ರೈತ ರಾಮಾಂಜನಪ್ಪ ತಿಳಿಸಿದರು.

 

Share This Article
error: Content is protected !!
";