ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೇವದಾಸಿ ಪುನರ್ವಸತಿ ಯೋಜನೆಯಡಿ ಖಾಲಿ ಇರುವ ಯೋಜನಾ ಅನುಷ್ಠಾನಾಧಿಕಾರಿ, ಲೆಕ್ಕಿಗರು(ಗುಮಾಸ್ತ) ಹಾಗೂ ಕಚೇರಿ ಸಹಾಯಕರ ತಲಾ ಒಂದು ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನಾ ಅನುಷ್ಠಾನಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿಯಲ್ಲಿ ಬಿ.ಎಸ್.ಡಬ್ಲೂಯ. ಅಥವಾ ಸಮಾಜಶಾಸ್ತçವನ್ನು ಅಭ್ಯಸಿಸಿರಬೇಕು. ಸ್ನಾತಕೋತ್ತರ ಪದವಿಯಲ್ಲಿ ಸಮಾಜಶಾಸ್ತç ಅಥವಾ ಮನೋವಿಜ್ಞಾನ ಅಭ್ಯಸಿಸಿರಬೇಕು. ಇದರೊಂದಿಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಮತ್ತು ಸರ್ಕಾರಿ ಅಧೀನ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವವಿರಬೇಕು. ಮೊಳಕಾಲ್ಮೂರು ತಾಲೂಕಿನ ನಿವಾಸಿಯಾಗಿರಬೇಕು. ಈ ಹುದ್ದೆಗೆ ಮಾಸಿಕ 9,000 ರೂ. ಗೌರವಧನ ನೀಡಲಾಗುವುದು.
ಲೆಕ್ಕಿಗರು(ಗುಮಾಸ್ತ) ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೂ ಸಹ ಕಂಪ್ಯೂಟರ್ ಜ್ಞಾನ ಇರುವುದು ಅತ್ಯಗತ್ಯವಾಗಿದ್ದು, ಮಾಸಿಕ 8,000 ರೂ. ಗೌರವಧನ ನೀಡಲಾಗುತ್ತದೆ. ಕಚೇರಿ ಸಹಾಯಕ ಹುದ್ದೆಗೆ ಕನಿಷ್ಠ 7ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಇವರಿಗೆ ಮಾಸಿಕ 7,000 ರೂ. ಗೌರವಧನ ಸಿಗಲಿದೆ. ಲೆಕ್ಕಿಗ ಹಾಗೂ ಕಚೇರಿ ಸಹಾಯಕರು ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ.
ಅಭ್ಯರ್ಥಿಗಳು 18 ರಿಂದ 45 ವರ್ಷದೊಳರುವ ಹಾಗೂ ಜಿಲ್ಲಾ ನಿವಾಸಿಗಳಿಗೆ ಮಾತ್ರ ಅರ್ಜಿಸಲ್ಲಿಸಬೇಕು. ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು. ಮೆರಿಟ್ ಹಾಗೂ ಕನಿಷ್ಠ 2 ವರ್ಷಗಳ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ನಗರದ ಬಾಲಭವನ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಫೆ.20ರ ಸಂಜೆ 5 ಗಂಟೆಯ ಒಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6360991070 ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.

