ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಯಲ್ಲಿ ಎಂ.ಆರ್.ಪಿ ದರ ರೂ.40 ಇರುವ ತಂಪು ಪಾನೀಯವನ್ನು ರೂ.50ಕ್ಕೆ ಮಾರಾಟ ಮಾಡುತ್ತಿರುವ ಕುರಿತು ಸಾಮಾಜಿಕ ದೃಶ್ಯ ಮಾಧ್ಯಮವಾದ ಪೇಸ್ ಬುಕ್‍ನಲ್ಲಿ ವಿಡಿಯೋ ಬಿತ್ತರವಾಗಿ ಆಕ್ಷೇಪಣೆಗಳು ಕೇಳಿ ಬಂದಿವೆ.
ಈ ಹಿನ್ನಲೆಯಲ್ಲಿ ಮಳಿಗೆ ಬಾಡಿಗೆ ಪಡೆದ ಅಂಗಡಿ ಮಾಲೀಕನಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗದ ಕರಾರುಗಳು ಉಲ್ಲಂಘನೆಗೆ ಒಪ್ಪಂದ ಕರಾರನ್ನು ಏಕೆ ರದ್ದುಪಡಿಸಬಾರದು ಅಥವಾ ದಂಡ ವಿಧಿಸಬಾರದು ಎಂಬುದರ ಬಗ್ಗೆ 7 ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕರಿ ನೋಟಿಸ್ ನೀಡಿದ್ದಾರೆ.
ಒಂದು ವೇಳೆ ನಿಗದಿತ ದಿನಾಂಕ ಅವಧಿಯೊಳಗಾಗಿ ತಮ್ಮಿಂದ ಯಾವುದೇ ಲಿಖಿತ ಉತ್ತರ ಬಾರದೇ ಇದ್ದಲ್ಲಿ ಏಕ ಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಳಿಗೆಯಲ್ಲಿ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಹಣವನ್ನು ಅಂಗಡಿಯವರು ಪಡೆಯುತ್ತಿದ್ದರೆ, ವಿಭಾಗೀಯ ನಿಯಂತ್ರಕರ ಕಚೇರಿಗೆ ಗ್ರಾಹಕರು ದೂರು ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

