“ತಪ್ಪಿಸಿಕೊಳ್ಳುವ” ಸಂಸ್ಕೃತಿ ಇದ್ದರೆ ಅದು ರಾಹುಲ್ ಗಾಂಧಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಅವರೇ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್‌ಭವನದಲ್ಲೇ ಇದ್ದರು. ರಾಜ್ಯ ಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದು ದಿಟ್ಟತನದಿಂದ ಮಾತನಾಡಿದರು.

ಲೋಕಸಭೆಯಲ್ಲಿ ನಿಮ್ಮ ಪಕ್ಷದ ಸದಸ್ಯರು ನಡೆಸಿದ ಅಸಂಸದೀಯ ನಡವಳಿಕೆ ಹಾಗೂ ಕುಚೇಷ್ಟಗಳ ಕುರಿತು ಮಾತನಾಡಿದರು. ವಾಸ್ತವವಾಗಿ “ತಪ್ಪಿಸಿಕೊಳ್ಳುವ” ಸಂಸ್ಕೃತಿ ಇದ್ದರೆ ಅದು ನಿಮ್ಮ ಕಾಂಗ್ರೆಸ್‌ನ ನೆಲೆಯಿಂದ ಉದ್ಭವಿಸಿದ್ದು. ಇದಕ್ಕೆ ಸಾಕ್ಷಿಯಾಗಿ ನಿಮ್ಮ ರಾಹುಲ್ ಗಾಂಧಿ ಅವರೇ ನಮ್ಮ ಕಣ್ಣ ಮುಂದೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

- Advertisement - 

ಕರ್ನಾಟಕದಲ್ಲಿ ನಿಮ್ಮ ಆಡಳಿತದ ಪ್ರತಿಫಲವೆಂಬಂತೆ ಅರಾಜಕತೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಪದವಿಯ ಸುತ್ತ ಕಳೆದ ಒಂದು ವರ್ಷದಿಂದಲೂ ದೊಂಬರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಭ್ರಷ್ಟಾಚಾರ, ಕಮೀಷನ್‌ದಂಧೆ ತಾಂಡವವಾಡುತ್ತಿದೆ.  ಜನರ ಗೋಳು ಹೇಳತೀರದಾಗಿದೆ. ಸಮಸ್ಯೆ ಬಗೆಹರಿಸಬೇಕಾದ ನಿಮ್ಮ ಹೈಕಮಾಂಡ್‌ರೂವಾರಿ ರಾಹುಲ್‌ಗಾಂಧಿಯವರು ಕೈಗೆ ಸಿಗದೇ “ತಪ್ಪಿಸಿಕೊಂಡಿದ್ದಾರೆ”.

ಅವರನ್ನು ಹುಡುಕಿಕೊಂಡು ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದಿನ ಬಿಟ್ಟು ದಿನ ದೈನೇಸಿ ಸ್ಥಿತಿಯಲ್ಲಿ ದೆಹಲಿಗೆ ಅಲೆಯುತ್ತಿದ್ದಾರೆ. ಮೊದಲು ನೀವು, ಉಪ ಮುಖ್ಯಮಂತ್ರಿ ಸೇರಿ ರಾಹುಲ್‌ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ. ಸಿಎಂ ಸ್ಥಾನದ ಕಗ್ಗಂಟನ್ನು ಬಿಡಿಸಿಕೊಳ್ಳಿ,

- Advertisement - 

ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತೀ ಶೀಘ್ರದಲ್ಲೇ ಕರ್ನಾಟಕದ ಜನತೆಯಿಂದ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್‌ಗೆ ಅಡ್ರೆಸ್‌ಸಿಗದ ಪರಿಸ್ಥಿತಿಗೆ ತಳ್ಳಸಿ ಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗಲಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

 

Share This Article
error: Content is protected !!
";