ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಸಭೆಯನ್ನು ಫೆಬ್ರವರಿ-11 ರಂದು ಹಿರಿಯೂರು ನಗರದ ಸಂಘದ ಕಚೇರಿಯಲ್ಲಿ ಕರೆಯಲಾಗಿತ್ತು.
ಹಿರಿಯೂರು ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಮಂಜುನಾಥ್ ಕಾತ್ರಿಕೇನಹಳ್ಳಿ ಸಭೆ ಉದ್ದೇಶಿಸಿ ಮಾತನಾಡಿ, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ತಮಿಳುನಾಡಿನಲ್ಲಿರುವ ಕುಂಚಿಟಿಗರ ಕುಲ ದೇಗುಲ ದರ್ಶನ ಮಾಡಲು ಚಿತ್ರದುರ್ಗ ಜಿಲ್ಲೆಯಿಂದ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ತಮಿಳುನಾಡು ಕುಂಚಿಟಿಗರ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ ಕೃಷಿ ಶಿಕ್ಷಣ ಇತ್ಯಾದಿ ವಿಷಯಗಳ ಕುರತು ಅಧ್ಯಯನ ಮಾಡಲಾಗುವುದು. ಕುಂಚಿಟಿಗ ಗಂಡು ಮಕ್ಕಳಿಗೆ ವಧು-ವರರ ಸಮಾವೇಶ ನಡೆಸುವ ಬಗ್ಗೆ ಈ ಪ್ರವಾಸದಲ್ಲಿ ಚರ್ಚೆ ನಡೆಸಲಾಗುವುದು. ಇದರ ಬಗ್ಗೆ ಕುಂಚಿಟಿಗರ ಮುಖಂಡರು ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸಮಾಜದವರು ಈ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರೊ.ಮೈಸೂರ್ ಶಿವಣ್ಣ, ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಜಿ ಹನುಮಂತ ರಾಯ್, ಕಸವನಹಳ್ಳಿ ರಮೇಶ್, ದಿಂಡಾವರ ಚಂದ್ರಗಿರಿ, ಉಪಾಧ್ಯಕ್ಷರಾದ ಶಶಿಕಲಾ, ಪಿಲಾಜನಹಳ್ಳಿ ರಾಮಸ್ವಾಮಿ, ಕೆ.ಕೆ.ಹಟ್ಟಿ ಜಯಪ್ರಕಾಶ್, ಹುಚ್ಚವನಹಳ್ಳಿ ಅವಿನಾಶ್, ಗಿರೀಶ್ ಆಪ್ಟಿಕಲ್ಸ್ ರಾಜೇಶ್ ಇತರರು ಹಾಜರಿದ್ದು ಸಲಹೆ ಸೂಚನೆ ನೀಡಿದರು.
ಪ್ರವಾಸದ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಕಾತ್ರಿಕೇನಹಳ್ಳಿ. ಇವರನ್ನು 9980835704 ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

