ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಆಕಾಶವಾಣಿಯ ಸಾಹಿತ್ಯ ಸಪ್ತಸ್ವರ ಸಂವಾದ ಕಾರ್ಯಕ್ರಮದಲ್ಲಿ ಫೆ.12 ರಂದು ಗುರುವಾರ ರಾತ್ರಿ 9.15 ರಿಂದ 10 ಗಂಟೆಯವರಗೆ ಬ್ರಿಟೀಷ್ ವಸಹಾತುಶಾಹಿ ಆಡಳಿತಗಾರ
ಪ್ರಾನ್ಸಿಸ್ ಬುಕನನ್ ಕಂಡ ಕ್ರಿ.ಶ.1800 ರ ಕಾಲಘಟ್ಟದ ಚಿತ್ರದುರ್ಗ ಕುರಿತು, ಹವ್ಯಾಸಿ ಪತ್ರಕರ್ತರು, ಲೇಖಕ, ಹಾಗೂ ಅನುವಾದಕ ಪ್ರೊ.ಎಂ.ಜಿ.ರಂಗಸ್ವಾಮಿ ಭಾಗವಹಿಸಿ ಮಾತನಾಡುವರು.
ಡಾ.ನವೀನ್ ಮಸ್ಕಲ್ ಸಂವಾದ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಆಸಕ್ತ ಕೇಳುಗರ ಸಂವಾದ ಕಾರ್ಯಕ್ರಮ ಆಲಿಸಿ ಚಿತ್ರದುರ್ಗ ಆಕಾಶವಾಣಿ ಕೇಂದ್ರವನ್ನು ಬೆಂಬಲಿಸುವಂತೆ ಪ್ರಕಟಣೆ ತಿಳಿಸಿದೆ.

