ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಅಡ್ಡಿಪಡಿಸುತ್ತಿರುವ “ಪ್ರಜಾಪ್ರಭುತ್ವ ವಿರೋಧಿ” ಶಕ್ತಿಗಳಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ! ಎಂದು ಬಿಜೆಪಿ ತಿಳಿಸಿದೆ.
ಒಂದು ಕಡೆ ಸಂವಿಧಾನದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್‌ಮತ್ತು ಇಂಡಿ ಮೈತ್ರಿಕೂಟವು ಇನ್ನೊಂದೆಡೆ ಚುನಾವಣಾ ಪ್ರಕ್ರಿಯೆಯನ್ನೇ ಬುಡಮೇಲು ಮಾಡಲು ಸಂಚು ರೂಪಿಸುತ್ತಿವೆ. ಬಂಗಾಳದಲ್ಲಿ SIR ನಡೆಸಲು ಅಧಿಕಾರಿಗಳ ನಿಯೋಜನೆಗೆ ಅಡ್ಡಿ, ಚುನಾವಣಾ ಆಯೋಗದ ನೋಟಿಸ್ ಸುಟ್ಟು ಹಾಕುವುದು ಇವೆಲ್ಲಾ ಕಾಂಗ್ರೆಸ್‌ಪ್ರಕಾರ ಪ್ರಜಾಪ್ರಭುತ್ವ!
ಕರ್ನಾಟಕದಲ್ಲೂ SIR ಬಗ್ಗೆ ಕಾಂಗ್ರೆಸ್ ಸರ್ಕಾರ ತೆಗೆಯಲು ಹೊರಟಿದ್ದ ಕ್ಯಾತೆಗೆ ಸುಪ್ರೀಂ ಕೋರ್ಟ್‌ಬ್ರೇಕ್‌ಹಾಕಿದೆ. SRI ಸಂವಿಧಾನಬದ್ಧ ಪ್ರಕ್ರಿಯೆ ಇದಕ್ಕೆ ಯಾವ ರಾಜ್ಯಗಳೂ ಅಡ್ಡಿಪಡಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಎಚ್ಚರಿಕೆ ದೇಶವಿರೋಧಿ ಕಾಂಗ್ರೆಸ್ಸಿಗರಿಗೆ ತಪರಾಕಿ! ಎಂದು ಬಿಜೆಪಿ ಹೇಳಿದೆ.

