ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಳವಂಗಲ ಹೋಬಳಿ ಮಧುರನಹೊಸಹಳ್ಳಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಧುರನಹೊಸಹಳ್ಳಿ ಗ್ರಾಮದಲ್ಲಿ, “ತಂಬಾಕು ಮುಕ್ತ ಯುವ ಅಂದೋಲನ”ವನ್ನು ಆಯೋಜಿಸಲಾಗಿತ್ತು.
ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಯುವಜನರನ್ನು ತಂಬಾಕುಮುಕ್ತ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು. ಗ್ರಾಮದ ಪ್ರಮುಖ ಬಿದಿಗಳಲ್ಲಿ ಜಾಥಾ ನಡೆಸಲಾಯಿತು. ಆನಂತರ ಮನೆಮನೆ ಭೇಟಿ ನೀಡಿ ತಂಬಾಕಿನಿಂದ ಆಗುವಂತ ದುಷ್ಪರಿಣಾಮಗಳ ಕುರಿತು ಮಾಹಿತಿ ತಿ
ಳಿಸಿ, ಅಂಗಡಿ ಮಾಲೀಕರಿಗೆ ಆಯೋಜಕರು ತಿಳಿವಳಿಕೆ ನೀಡಿದರು. ಹಾಗೂ ಗ್ರಾಮದ ಯುವಕರು ತಂಬಾಕು ಸೇವನೆ ತ್ಯಜಿಸುವ ಪ್ರತಿಜ್ಞೆ ಮಾಡಿದರು.
ಶಾಲೆಗಳ ಸುತ್ತಮುತ್ತ ಮಾರಾಟ ನಿಷೇಧ ಜಾಗೃತಿಗಾಗಿ ಗೋಡೆ ಬರಹ, ಬ್ಯಾನರ್, ಪೋಸ್ಟರ್ ಪ್ರದರ್ಶನ “ತಂಬಾಕು ಮುಕ್ತ ಹಳ್ಳಿ” ಸಂದೇಶವನ್ನು ಸಾರ್ವಜನಿಕ ತಿಳಿಸಿದರು.
ಈ ವೇಳೆ ಹಾದ್ರೀಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಂದಿನಿ, ಪಂಚಾಯ್ತಿ ಸಿಬ್ಬಂದಿ, ಗ್ರಾಮದ ಯುವಕರು, ಹಿರಿಯರು ಉಪಸ್ಥಿತರಿದ್ದರು.

