ಆರೆಂಜ್ ತುಂಬಿದ ಲಾರಿಯೊಂದು ಪಲ್ಟಿ ಅಪಾರ ನಷ್ಟ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಾಲಕನ ನಿಯಂತ್ರಣ ತಪ್ಪಿ ಆರೆಂಜ್ ತುಂಬಿದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಗಲ್ ಗ್ರಾಮದ ಬಳಿ ಜರುಗಿದೆ.

ಕಿತ್ತಲೆ ಹಣ್ಣು ತುಂಬಿದ ಲಾರಿ ಮುಂಬೈನಿಂದ ಬೆಂಗಳೂರು ನಗರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಆರೆಂಜ್ ಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

- Advertisement - 

ಲಾರಿ ಪಲ್ಟಿಯಾದ ಸ್ಥಳದಲ್ಲಿ ಭಾರೀ ಪ್ರಮಾಣದ ಆರೆಂಜ್ ಹಣ್ಣುಗಳು ರಸ್ತೆಯ ಮೇಲೆ ಚೆಲ್ಲಿದ್ದರಿಂದ, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು.

ಇದರಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ನಿಧಾನವಾಗಿ ಸಾಗುವಂತಾಯಿತು. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಹಾಸ ಪಟ್ಟರು.

- Advertisement - 

 

 

Share This Article
error: Content is protected !!
";