ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗೀಗ ಸುವರ್ಣ ಸಂಭ್ರಮ-ಸಿಎಂ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಪ್ರದೇಶ
, ರಾಜ್ಯ ಅಥವಾ ದೇಶ ಪ್ರಗತಿಯ ಉತ್ತುಂಗಕ್ಕೇರಬೇಕಾದರೆ ಸಾಮಾಜಿಕ ಆಯಾಮವುಳ್ಳ ವೈಜ್ಞಾನಿಕ ಕ್ರಾಂತಿ ಸದ್ದಿಲ್ಲದೆ ಜಾರಿಯಲ್ಲಿರಬೇಕು. ಜನಜೀವನದ ಭಾಗವಾಗಿರುವ ಪರಿಸರ, ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ವಸತಿ ಹೀಗೆ ಸಮಾಜದ ಪ್ರತಿ ಕ್ಷೇತ್ರ ಹಾಗೂ ವರ್ಗಗಳಲ್ಲಿನ ಮೂಲಭೂತ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗ್ರಹಿಸಿ ಅವುಗಳ ಕುರಿತು ಅಧ್ಯಯನ ನಡೆಸಿ ವಿಜ್ಞಾನ & ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಮತ್ತು ವಸ್ತುಸ್ಥಿತಿಗೆ ಅನುಗುಣವಾಗಿ ಆ ಪರಿಹಾರವನ್ನು ಕಾರ್ಯಗತಗೊಳಿಸುವುದು ಬಹುಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಾಗಿ ವೈಜ್ಞಾನಿಕ ಸಂಸ್ಥೆಯೊಂದರ ಅಗತ್ಯತೆಯನ್ನು ಮನಗಂಡ ಸರ್ಕಾರ 1975ರಲ್ಲಿ ದೇಶದಲ್ಲೇ ಮೊಟ್ಟ ಮೊದಲ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯನ್ನು ಬೆಂಗಳೂರಿನ ಹೃದಯ ಭಾಗದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಿತು.

- Advertisement - 

ಪ್ರಸ್ತುತ 50 ವರ್ಷಗಳ ಸುವರ್ಣ ಮಹೋತ್ಸವಕ್ಕೆ ಸಾಕ್ಷಿಯಾಗಿರುವ ಈ ವಿಜ್ಞಾನ & ತಂತ್ರಜ್ಞಾನ ಮಂಡಳಿ ಪ್ರಗತಿಶೀಲ ಕರ್ನಾಟಕದ ಶಾಶ್ವತ ಸಂಕೇತ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

54 ಸದಸ್ಯರನ್ನು ಹೊಂದಿರುವ ಈ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮುಖ್ಯಮಂತ್ರಿಗಳು ಈ ಮಂಡಳಿಯ ಅಧ್ಯಕ್ಷರಾದರೆ, ವಿಜ್ಞಾನ & ತಂತ್ರಜ್ಞಾನ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

- Advertisement - 

ಕಳೆದ 50 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಂಪನ್ಮೂಲಗಳ ನಿರ್ವಹಣೆ, ಜನರ ಜೀವನ ಮಟ್ಟ ಸುಧಾರಣೆ ಸೇರಿದಂತೆ ಹಲವು ಆಯಾಮಗಳಲ್ಲಿ ಪ್ರತಿಹಂತದಲ್ಲೂ ವಿಜ್ಞಾನ & ತಂತ್ರಜ್ಞಾನದ ಬಳಕೆ ಮತ್ತು ಅಳವಡಿಕೆಯ ಮೂಲಕ ಮಂಡಳಿ, ಒಂದೊಂದೇ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಬಂದಿದೆ ಎಂದು ಅವರು ತಿಳಿಸಿದರು.

 

 

Share This Article
error: Content is protected !!
";