ಎತ್ತರ ಪ್ರದೇಶದಲ್ಲೂ ದ್ರಾಕ್ಷಿ ಕಾಂತಿ, 4 ಎಕರೆ, 40-45 ಲಕ್ಷ ಆದಾಯ ನಿರೀಕ್ಷೆ!

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀರಾವರಿಯ ನೆರವಿನಿಂದ ಎತ್ತರ ಪ್ರದೇಶದಲ್ಲೂ ದ್ರಾಕ್ಷಿಯ ಕಾಂತಿ
4 ಎಕರೆ ಬೆಳೆ, ರೂ. 40-45 ಲಕ್ಷ ಆದಾಯ ನಿರೀಕ್ಷೆ! ಹೊಂದಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಬಬಲೇಶ್ವರ ಮತಕ್ಷೇತ್ರದ  ಕನಮಡಿ ಗ್ರಾಮದ ರೈತರಾದ ಬಶೀರ್ ಮುಲ್ಲಾ ಅವರು ಮಹಾರಾಷ್ಟ್ರ ಗಡಿಗೆ ಸಮೀಪವಿರುವ ಅತಿ ಎತ್ತರದ ಧರಿದೇವರ ಗುಡ್ಡದ ಬಳಿ 4 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಈ ವರ್ಷ ಅವರು  40–45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

- Advertisement - 

ಈ ಎತ್ತರ ಪ್ರದೇಶದಲ್ಲಿಯೂ ನೀರಾವರಿ ಕಲ್ಪಿಸಿರುವುದರಿಂದ ತೋಟಗಾರಿಕೆ ಸಾಧ್ಯವಾಗಿದೆ ಎಂದು ಅವರು ಅಭಿಮಾನದಿಂದ ತಿಳಿಸಿದರು. ಜೊತೆಗೆ, ತಾವು ಬೆಳೆದ ದ್ರಾಕ್ಷಿಯನ್ನು ಬೆಂಗಳೂರಿನ ನನ್ನ ನಿವಾಸಕ್ಕೆ ತಂದುಕೊಟ್ಟರು. ಅವರ ಆತ್ಮೀಯತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಪಾಟೀಲ್ ಸಲ್ಲಿಸಿದ್ದಾರೆ.

ಬಶೀರ್ ಮುಲ್ಲಾ ಅವರ ಕೃಷಿ ಹಾಗೂ ತೋಟಗಾರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಸಚಿವ ಎಂ.ಬಿ ಪಾಟೀಲ್ ಶುಭ ಹಾರೈಕೆ ಮಾಡಿದ್ದಾರೆ.

- Advertisement - 

 

Share This Article
error: Content is protected !!
";