ದೊಡ್ಡವರ ಭಾಷಣಕ್ಕೆ ಸೀಮಿತವಾದ ವಚನ ಚಿಂತನೆಗಳು-ಶ್ರೀಗಳ ವಿಷಾದ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಇಂದಿನ ಯುವ  ಪೀಳಿಗೆಯ ಮಕ್ಕಳಿಗೆ ಕಾಯಕ
, ದಾಸೋಹ, ಶಿವಯೋಗ ಸೇರಿದಂತೆ ಇನ್ನಿತರ ತತ್ವಾದರ್ಶಗಳ ಪದಗಳನ್ನು ಹೇಳಿದಾಗ ಆಗದಂದರೇನು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಕೊಟ್ಟೂರಿನಲ್ಲಿ ನೆಲೆ ನಿಂತ ಗುರುಬಸವೇಶ್ವರ ರಥೋತ್ಸವ ನಿಮಿತ್ತ ನಗರದ ಜಯಲಕ್ಷ್ಮಿ ಬಡಾವಣೆಯ ಮತ್ತೋಡು ಗುರುಶಾಂತಪ್ಪ ಕೊಟ್ರಪ್ಪ ದಂಪತಿಗಳು ಮನೆಯಲ್ಲಿ ಏರ್ಪಡಿಸಿದ್ದ ಪ್ರಸಾದ ದಾಸೋಹದಲ್ಲಿ ಭಾಗವಹಿಸಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಭಾಗವಹಿಸಿದವರೊಂದಿಗೆ ವಿಷಯ ಪ್ರಸ್ತಾಪಿಸುತ್ತಾ ಶ್ರೀಗಳು ಮಾತನಾಡಿದರು.

- Advertisement - 

ದೊಡ್ಡವರು ಭಾಷಣಕ್ಕೆ ವಚನ ಇನ್ನಿತರ ಚಿಂತನೆಗಳನ್ನು ಬಳಸಿಕೊಳ್ಳುತ್ತಾರೆ. ಅನುಷ್ಠಾನಕ್ಕೆ ಬಂದಾಗ ಅವುಗಳ ಅರ್ಥ ತಿಳಿಯುತ್ತದೆ. ಮಕ್ಕಳನ್ನು ಓದುವ ಯಂತ್ರಗಳನ್ನಾಗಿಸಿ, ಕೇವಲ ಪದವಿ ಪಡೆಯಲು ಅವರನ್ನು  ರೂಪಿಸುತ್ತಿರುವುದರಿಂದ ಸಾಮಾನ್ಯ ಜ್ಞಾನ ಇಲ್ಲದಂತಾಗಿ ಈಗಿನ ಮಕ್ಕಳು  ಸನ್ಮಾರ್ಗ ಬದಲಿಸುತ್ತಿರುವುದು ಆತಂಕದ ಬೆಳವಣಿಗೆ ಶ್ರೀಗಳವರು ಇಂದು ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಅಂದು ನಾಡಿನಲ್ಲಿ ನಡೆದಾಡಿ ಜನರ ಯೋಗ ಕ್ಷೇಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡರು.

ಕೊಟ್ಟೂರು ಜಾತ್ರೆ ಅಥವಾ ರಥೋತ್ಸವ ಅಂದರೆ ಭಕ್ತರು ಎಲ್ಲೆಲ್ಲಿಂದಲೋ ಹತ್ತಾರು ದಿನಗಳ ಕಾಲ ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ಕೊಟ್ಟೂರಿಗೆ ಬಂದು ಇಂದು ಸೇರುತ್ತಾರೆ. ಪಾದಯಾತ್ರೆ ಎಂದರೆ ದೇಹ ದಂಡನೆ ಮಾಡಿ ತನ್ನಲ್ಲಿರುವ ಅಹಂಕಾರವನ್ನು ಕಳೆದುಕೊಳ್ಳುವ ಅರ್ಥಾತ್  ವಿನಯವಂತರಾಗಲು ಪ್ರೇರಣೆಯೇ ಪಾದಯಾತ್ರೆಯ ದಿವ್ಯ ಸಂದೇಶವಾಗಿದೆ.

- Advertisement - 

ಇನ್ನು ನಮ್ಮ ಕೊಟ್ರೇಶಪ್ಪ ದಂಪತಿಗಳು ಕಳೆದ ಒಂದೆರಡು ದಶಕಗಳಿಂದ ಕೇವಲ ನಾಲ್ಕಾರು ಜನ ಸೇರಿ ಈ ಹಿಂದೆ ಮನೆಗೆ ಸೀಮಿತ ಮಾಡಿಕೊಂಡಿದ್ದ ರಥೋತ್ಸವ ನಿಮಿತ್ತ ಏರ್ಪಡಿಸುತ್ತಿದ್ದ ದಾಸೋಹ ಇಂದು 400 ರಿಂದ 500 ಜನರಿಗೆ ಒಬ್ಬ ವ್ಯಕ್ತಿ ಸಾಕಷ್ಟು ಹಣ ವ್ಯಯಿಸಿ ದಾಸೋಹ ಮಾಡುವುದು, ಇದು ತನ್ನ ಕಾಯಕದಲ್ಲಿ ಬಂದದ್ದನ್ನು ದಾಸೋಹ ರೂಪದಲ್ಲಿ ದಾಸನಾಗಿ ,ತಯಾರಿಸಿದ ಪದಾರ್ಥವನ್ನ ನೀಡಿ ಬಂದವರನ್ನು ಸಂಪ್ರೀತಗೊಳಿಸುವುದೇ ಆಗಿದೆ. ದಾಸೋಹ ಅಂದರೆ ಅಹಂಕಾರ ನಿರಶನವೇ ಆಗಿದೆ. ನಂತರದಲ್ಲಿ ಶಿವಯೋಗ ಮನುಷ್ಯ ತನ್ನ ಅಂತರಂಗದ ಮನಸ್ಸಿನ ತಾಕಲಾಟವನ್ನು ತಡೆಹಿಡಿದು ನಿಲ್ಲಿಸುವ ಲಿಂಗಾನುಸಂಧಾನದ ಇಷ್ಟಲಿಂಗ ನಿರೀಕ್ಷಣೆಯ ಮೂಲಕ ಸಾಧ್ಯವಿದೆ.

ಇದು ಈಗಿನ ಮಕ್ಕಳಿಗೆ ದೊಡ್ಡವರು ಇವನ್ನ ಹೇಳಿಕೊಡುತ್ತಿದ್ದಾರೆಯೇ ? ನಿಮ್ಮನ್ನು ನೀವೇ ಪ್ರಶ್ನೆಸಿಕೊಳ್ಳಿ ಎಂದು ಹೇಳಿದರು. ಇಂದು ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಸೌಲಭ್ಯಗಳ ಕೊರತೆ ಆಗದಂತೆ ನೋಡಿಕೊಳ್ಳುತ್ತಿರುವ ಕಾರಣ ಬೇರೆ ಪ್ರಾಪಂಚಿಕ ಜ್ಞಾನದ ಅರಿವು ಅವರಿಗೆ ಆಗುತ್ತಿಲ್ಲ. ಮಠಗಳಲ್ಲಿ ಬೆಳೆಯುತ್ತಿರುವ ಮಕ್ಕಳು ಓದಿನ ಜೊತೆಗೆ ಬೇರೆ ವಿಷಯಗಳನ್ನು ಅವರು ಪ್ರಾಕ್ಟಿಕಲ್ ಆಗಿ ನೋಡಿ ಕಲಿಯುತ್ತಾರೆ ಮತ್ತು ತಿಳಿಯುತ್ತಾರೆ. ಸಾಧ್ಯವಾದಷ್ಟು ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವತ್ತ  ಗಮನಹರಿಸಬೇಕಿದೆ. ಕೇವಲ ಪಠ್ಯದ ಓದೇ ಮುಖ್ಯವಲ್ಲ.  ಅದರ ಜೊತೆಗೆ ಸಂಸ್ಕಾರ ಅಗತ್ಯ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ  ಜನಪ್ರತಿನಿಧಿಗಳು, ಕೃಷಿಕರು, ವ್ಯಾಪಾರಸ್ಥರುಶಿಕ್ಷಣ ಇಲಾಖೆ, ವಿವಿಧ ಕ್ಷೇತ್ರಗಳವರು ಸೇರಿದಂತೆ ಕೊಟ್ರಪ್ಪ ದಂಪತಿಗಳ ಸ್ನೇಹಿತರು ,ಬಂಧು ಬಳಗ ನೂರಾರು ಸಂಖ್ಯೆಯಲ್ಲಿ ಸೇರಿ ಪ್ರಸಾದ ಸವಿದರು. ಪರೋಕ್ಷವಾಗಿ ನಾವು ಇಲ್ಲಿ ಕೊಟ್ಟೂರೇಶ್ವರರ ರಥವನ್ನು ಇಲ್ಲೇ ಕಣ್ತುಂಬಿಕೊಂಡಂತಾಗಿದೆ  ಎಂದು ಭಕ್ತಿಯಿಂದ ಹೇಳಿಕೊಂಡರು.

 

Share This Article
error: Content is protected !!
";