ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಬೆಸ್ಕಾಂ ವಿಭಾಗೀಯ ಕಛೇರಿ ಮುಂಭಾಗದಲ್ಲಿ ಅಖಿಲ ಭಾರತ ಇಂಜಿನಿಯರ್ ಮತ್ತು ನೌಕರರ ಒಕ್ಕೂಟ ಹಾಗೂ ಇತರೆ ಕೈಗಾರಿಕೆ ಒಕ್ಕೂಟಗಳು ರಾಜ್ಯದ್ಯಂತ ಒಂದು ದಿನದ ಸಾಂಕೇತಿಕವಾಗಿ ಮುಷ್ಕರ ನಡೆಸಿ ಕೇಂದ್ರ ಖಾಸಗೀಕರಣ ವಿರುದ್ದ ಮುಷ್ಕರ ನಡೆಸಿದರು.
ಕೇಂದ್ರ ಸರ್ಕಾರವು ವಿದ್ಯುತ್ ಸುಧಾರಣಾ ಕಾಯ್ದೆ ೨೦೨೬ ಈ ಕಾಯ್ದೆ ಮೂಲಕ ವಿದ್ಯುತ್ ಇಲಾಖೆಗಳ ಖಾಸಗೀಕರಣ ಗೊಳಿಸಲು ಮುಂದಾಗಿದೆ. ಆದರೆ ಇದು ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯಾಗಿದ್ದು ಕೇಂದ್ರ ಈ ಖಾಸಗೀರಣ ನೀತಿ ಜಾರಿಯಾದಲ್ಲಿ ಬಿ.ಎಸ್.ಎನ್.ಎಲ್ ಇಲಾಖೆಯಂತೆ ನೌಕರರು ಹಾಗು ಗ್ರಾಹಕರು ಅಸ್ತಿತ್ವವನ್ನು ಕಳೆದುಕೊಳ್ಳುಬೇಕಾಗುತ್ತದೆ ಎಂದರು.
ಖಾಸಗೀಕರಣ ಮಾಡುವುದರಿಂದ ಕಾರ್ಮಿಕ ವರ್ಗ ಆತಂಕಕ್ಕೆ ಒಳಗಾಗುತ್ತದೆ. ಬೆಸ್ಕಾಂ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೇಂದ್ರದ ಖಾಸಗೀಕರಣ ನೀತಿಯು ಕಾರ್ಮಿಕರಿಗೆ ಮಾರಕವಾಗಿದ್ದು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಮುಷ್ಕರದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜ್ ಎಂ.ಹೆಚ್, ಕ.ವಿ.ಪ್ರ.ನಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ಬಸವರಾಜ್, ಎಇಇ ಹೆಚ್.ತಿಮ್ಮಣ್ಣ, ನಾಗರಾಜ್ ಮತ್ತು ಬೆಸ್ಕಾಂ ನೌಕರರ ಸಂಘ ಎಲ್.ರವಿ ಹಾಗೂ ಕೇಂದ್ರ ಕಾರ್ಯ ಸಮಿತಿ ಸದಸ್ಯರು ಕ.ವಿ.ಪ್ರ.ನಿ.ನಿ ಮತ್ತು ಬೆಸ್ಕಾಂ ನೌಕರರ ಸಂಘದ ಸದಸ್ಯರು ಹಾಜರಿದ್ದರು.

