8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ
, ಕಾಲೇಜಿನಲ್ಲಿ, ಜನವರಿ 2027ನೇ ಅಧಿವೇಶನಕ್ಕಾಗಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2026ನೇ ಜೂನ್ 07 ರಂದು ನಡೆಸಲಾಗುವುದು. ಅರ್ಜಿ ಸಲ್ಲಿಸಲು 2026 ರ ಏಪ್ರಿಲ್ 5 ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 01-01-2027 ರಂತೆ 11 ವರ್ಷ 6 ತಿಂಗಳುಗಳಿಂದ 13 ವರ್ಷದೊಳಗಿರುವ ಬಾಲಕ ಮತ್ತು ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿಧ್ಯಾಭ್ಯಾಸ, ಶುಲ್ಕ ಸಾಮಾನ್ಯ ವರ್ಗಕ್ಕೆ  ರೂ.98,650/-ಗಳು  ಹಾಗೂ ಎಸ್‍ಸಿ / ಎಸ್‍ಟಿ ವರ್ಗಕ್ಕೆ ರೂ 81,850/- ಗಳಾಗಿರುತ್ತದೆ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ ರೂ. 50,000/- ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿಯು ಪದವೀಧರರಾದ ಬಳಿಕ ಹಿಂತಿರುಗಿಸಲಾಗುವುದು.

- Advertisement - 

ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್ –  248003 ಈ ವಿಳಾಸದ ಮೂಲಕ ಪಡೆಯಬಹುದು.

ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-ಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.555/-ಗಳು  ಆನ್‍ಲೈನ್ ಪಾವತಿ ಮಾಡಬೇಕು. ವೆಬ್‍ಸೈಟ್ https://rimc.edu.in ನಲ್ಲಿ ಪಾವತಿ ಸ್ವೀಕರಿಸಿದ  ನಂತರ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸಲಾಗುತ್ತದೆ.

- Advertisement - 

ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-ಗಳ ಬೇಡಿಕೆಯ ಕರಡು ಮತ್ತು ಪರಿಶಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.555/-ಗಳ ಬೇಡಿಕೆಯ ಕರಡು ಕಳುಹಿಸಿ ಲಿಖಿತ ವಿನಂತಿಯ ಪರವಾಗಿ ಜಾತಿ ಪ್ರಮಾಣಪತ್ರದೊಂದಿಗೆ ಕಳುಹಿಸಬಹುದು.  “THE COMMANDANT RIMC FUND” PAYABLE AT HDFC BANK, BALLUPUR CHOWK DEHRADUN (BANK CODE, 1399), UTTARAKHAND ವಿಳಾಸ, ಪಿನ್ ಕೋಡ್ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ ಬರೆಯಬೇಕು. ಕಾನೂನು ಬಾಹಿರ ಅಥವಾ ಅಪೂರ್ಣ ವಿಳಾಸದಿಂದ ಉಂಟಾಗುವ ಪ್ರಾಸ್ಪೆಕ್ಟಸ್‍ನ ಸಾಗಾಣಿಕೆಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ ಆರ್‍ಐಎಂಸಿ ಸಂಸ್ಥೆಯು ಜವಾಬ್ದಾರರಾಗಿರುವುದಿಲ್ಲ.

ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಮುನ್ಸಿಪಾಲಿಟಿ / ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾμÉಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ದೃಢೀಕೃತ ಪ್ರತಿ, 4 ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ಆಂಗ್ಲ ಭಾಷೆಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ, ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ ನೊಂದಾಯಿತ ಅಂಚೆದ್ವಾರ ರವಾನಿಸಲು ಹೊರ ಜಿಲ್ಲೆಯವರು ರೂ. 56/- ಹಾಗೂ ಬೆಂಗಳೂರು ನಗರ ವ್ಯಾಪ್ತಿಯವರು ರೂ. 23/- ಗಳ ಅಂಚೆ ಚೀಟಿ ಅಂಟಿಸಿದ ಸ್ವ ವಿಳಾಸ ಲಕೋಟೆಶಾಲಾ ಶಾಚಾರ್ಯರು / ಮುಖ್ಯೋಪಾಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಧೃಡೀಕರಿಸಿದ ಅಭ್ಯರ್ಥಿಯ ಭಾವಚಿತ್ರದೊಂದಿಗೆ ಪಡೆದ ಪ್ರಮಾಣ ಪತ್ರದ ಮೂಲ ಪ್ರತಿತಹಸೀಲ್ದಾರರಿಂದ ಕರ್ನಾಟಕ ರಾಜ್ಯದ ವಾಸಸ್ಥಾನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಅಡಕಗಳೊಂದಿಗೆ 2026 ನೇ ಏಪ್ರಿಲ್ 05 ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ್, ನಂ.58, ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ರಸ್ತೆ, ಬೆಂಗಳೂರು – 25 ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಅಥವಾ ಸಮೀಪದಲ್ಲಿರುವ ತಮ್ಮ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕರಾದ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಎಮ್ ಎಸ್ ಲೋಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";