ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ನಗರದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ನ 21 ಜ್ಯೋತಿರ್ಲಿಂಗಗಳ ಮೆರವಣಿಗೆಯ ಉದ್ಘಾಟನೆಯನ್ನು ಚಿದಾನಂದ ಬಿಲ್ಡಿಂಗ್ ಡೆವಲಪರ್ ಹಾಗೂ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಸುಜಾತ ಅವರು ನೆಡೆಸಿಕೊಟ್ಟರು.
ಶಿವರಾತ್ರಿ ಪ್ರಯುಕ್ತ 21 ಜ್ಯೋತಿರ್ಲಿಂಗಗಳ ಮೆರವಣಿಗೆ ಆಯೋಜನೆ ಮಾಡಿರುವುದು ಸಂಸ್ಕಾರ ಉಳಿಸುವ ಉದ್ದೇಶವಾಗಿದೆ. ಶಿವರಾತ್ರಿಯಂದು ಶಿವನನ್ನು ಪೂಜಿಸುವುದು ಮತ್ತು ಜಾಗರಣೆ ಮಾಡುವುದು ಪ್ರಮುಖ ಆಚರಣೆಗಳಾಗಿದೆ ಎಂದು ಹೇಳಿದರು.
ಶಿವರಾತ್ರಿಯಂದು ಶಿವನ 12 ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ಜ್ಯೋತಿರ್ಲಿಂಗಗಳಾದ ಸೋಮನಾಥ್, ಮಲ್ಲಿಕಾರ್ಜುನ, – ಮಹಾಕಾಲೇಶ್ವರ, ಓಂಕಾರೇಶ್ವರ, ಕೇದಾರನಾಥ್, ಭೀಮಾಶಂಕರ್, ವಿಶ್ವನಾಥ್, ತ್ರಂಬಕೇಶ್ವರ, ವೈದ್ಯನಾಥ್, ನಾಗೇಶ್ವರ, ರಾಮೇಶ್ವರ, ಘೃಷ್ಣೇಶ್ವರ ಜ್ಯೋತಿರ್ಲಿಂಗಗಳನ್ನು ಪೂಜಿಸುವುದು ವಿಶೇಷವಾಗಿದೆ. ಶಿವರಾತ್ರಿಯಂದು ಈ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ ಪೂಜೆ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.

