ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಖಾಸಗಿವಿದ್ಯಾಸಂಸ್ಥೆಗಳು ಗುಣಾತ್ಮಕ ಬೋಧನೆಮೂಲಕ ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ನನಸು ಮಾಡುವತ್ತ ಗಮನನೀಡಬೇಕು. ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನವಿಡಬೇಕು. ಅಗತ್ಯಬಿದ್ದರೆ ಪೋಷಕರಿಗೂ ಮಾಹಿತಿ ನೀಡಬೇಕು, ಶೈಕ್ಷಣಿಕ ಪ್ರಗತಿಯಲ್ಲಿ ಖಾಸಗಿವಿದ್ಯಾಸಂಸ್ಥೆಗಳ ಪಾತ್ರ ಹೆಚ್ಚು ಮಹತ್ವದಿಂದ ಕೂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಅವರು, ಅಜ್ಜಯ್ಯನಗುಡಿರಸ್ತೆಯ ಶ್ರೀಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ೩೦ವರ್ಷಗಳ ಹಿಂದೆ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆ ಸಣ್ಣಪ್ರಮಾನದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಬೋಧನೆ ನೀಡುವ ಮೂಲಕ ಕಾರ್ಯಾರಂಭಮಾಡಿತು. ಆದರೆ, ಇಂದು ಎಲ್ಲರ ಸಹಕಾರದಿಂದ ಪೋಷಕರು ಹಾಗೂ ವಿದ್ಯಾಸಂಸ್ಥೆಯ ಬೋಧಕ, ಬೋಧಕೇತರ ಸಹಕಾರದಿಂದ ಹೆಮ್ಮೆರವಾಗಿ ಬೆಳೆದಿದೆ. ಪ್ರತಿವರ್ಷವೂ ಶಾಲೆ ಉತ್ತಮಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕಹೊರೆಯಾಗದಂತೆ ಶಿಕ್ಷಣನೀಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಗಣನೀಯಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಸಚಿವರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದಶಾಸಕ, ಸಣ್ಣಕೈಗಾರಿಕೆ ಅಭಿವೃಧ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಸುಮಾರು ೧೪ ವರ್ಷಗಳಿಂದ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗಿದೆ. ವಿಶೇಷವಾಗಿ ಶೈಕ್ಷಣಿಕ ಪ್ರಗತಿಯಲ್ಲಿ ಪ್ರತಿಯೊಂದು ಖಾಸಗಿಶಾಲೆಯೂ ತನ್ನದೇಯಾಧ ಗುರಿ ಮತ್ತು ಗೌರವವನ್ನು ಹೊಂದಿದೆ. ಆದರೆ, ಸ್ವಾಮಿವಿವೇಕಾನಂದ ವಿದ್ಯಾಸಂಸ್ತೆಯಲ್ಲಿ ಶಿಕ್ಷಣ, ಸಂಯಮ, ಶಿಸ್ತುನ್ನು ಕಲಿಸಲಾಗುತ್ತಿದೆ.
ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯಾಭ್ಯಾಸಮಾಡಿ ಶಾಲೆಗೂ, ಊರಿಗೂ ಕೀರ್ತಿತರಬೇಕಿದೆ. ಪ್ರತಿವರ್ಷವೂ ಈ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತಿಯೊಂದು ಹಂತದಲ್ಲೂ ಸಂಸ್ಥೆಯ ಪ್ರಗತಿ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನೇಕ ಮನೋರಂಜನಾ ಕಾರ್ಯಕ್ರಮಗಳನ್ನು ನೆಡಿಸಿಕೊಟ್ಟರು. ಎಲ್ಲಾ ವಿದ್ಯಾರ್ಥಿಗಳು ಶಿಸ್ತಿನಿಂದ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಕಪ್ಪುಚುಕ್ಕಿ ಇಲ್ಲದೆ ಈ ವಿದ್ಯಾಸಂಸ್ಥೆ ೩೦ವರ್ಷಗಳಿಗೂ ಹೆಚ್ಚುಕಾಲ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದೆ. ಮುಂದಿನ ದಿನಗಳಲ್ಲೂ ಈ ವಿದ್ಯಾಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ವಿದ್ಯಾಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಸಾಕಷ್ಟು ಪರಿಶ್ರಮವಹಿಸಿ ಸಚಿವ ಡಿ.ಸುಧಾಕರ ಈ ಸಂಸ್ಥೆಯನ್ನು ಇನ್ನೂ ಎತ್ತಕ್ಕೆ ಕೊಂಡೊಯುತ್ತಾರೆಂಬ ನಂಬಿಕೆ ನನಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಶಿವಲಿಂಗಪ್ಪ, ಆಡಳಿತಾಧಿಕಾರಿ ಡಿ.ಆರ್.ಪ್ರಮೀಳಾ, ಮಾಜಿ ನಗರಸಭಾ ಸದಸ್ಯರಾದ ಕವಿತಾ ಬೋರಯ್ಯ, ಸುಜಾತ ಪಾಲಯ್ಯ ಮುಂತಾದವರು ಉಪಸ್ಥಿತರಿದ್ದರು.

