ಶೇ.50ರ ಸಹಾಯಧನದಡಿ ರಾಗಿ ಕ್ಲೀನಿಂಗ್-ಪಾಲಿಷ್ ಮಷಿನ್, ಹಿಟ್ಟಿನ ಗಿರಣಿ, ಎಣ್ಣೆಗಾಣಕ್ಕೆ ರೈತರಿಂದ ಅರ್ಜಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕೃಷಿ ಇಲಾಖೆಯಲ್ಲಿ ರೈತರಿಗೆ ಶೇಕಡಾ 50ರ ಸಹಾಯಧನದಡಿ ಕೃಷಿ ಸಂಸ್ಕರಣಾ ಘಟಕಗಳಾದ ರಾಗಿ ಕ್ಲೀನಿಂಗ್ ಮಷಿನ್
, ಹಿಟ್ಟಿನ ಗಿರಣಿ, ಅಕ್ಕಿಯಂತ್ರ, ಬೇಳೆ ಮಾಡುವ ಯಂತ್ರ, ಎಣ್ಣೆಗಾಣ, ರಾಗಿ ಪಾಲಿಷ್ ಮಾಡುವ ಯಂತ್ರ ಇತ್ಯಾದಿ ಲಭ್ಯವಿದ್ದು, ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ರೈತರ ವಂತಿಕೆ ಪಾವತಿಸಿ ತಮಗೆ ಅವಶ್ಯವಿರುವ ಉಪಕರಣಗಳನ್ನು ಪಡೆಯಬಹುದಾಗಿದೆ ಎಂದು  ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಶೋಕ್. ಜೆ ರವರು ತಿಳಿಸಿರುತ್ತಾರೆ.

- Advertisement - 

ಹೆಚ್ಚಿನ ಮಾಹಿತಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಲು ಅವರು ಕೋರಿದ್ದಾರೆ.

 

- Advertisement - 

 

Share This Article
error: Content is protected !!
";