ಗಮನ ಸೆಳೆದ ಜೆಟ್ ಶಾಲೆಯ ಮಕ್ಕಳ ವಸ್ತು ಪ್ರದರ್ಶನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಟ್ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಮಕ್ಕಳು ತಯಾರಿಸಿದ ವಸ್ತು ಪ್ರದರ್ಶನವನ್ನು ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ಅವರು ಉದ್ಘಾಟಿಸಿದರು.

ಸುಮಾರು ೧೫೦ಕ್ಕೂ ಹೆಚ್ಚು ಮಕ್ಕಳು ತಾವು ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಿದರು.
ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಂದ ವಸ್ತು ಪ್ರದರ್ಶನ ಗಮನ ಸೆಳೆಯಿತು. ಈ ಪ್ರದರ್ಶನದಲ್ಲಿ ಮಕ್ಕಳು ತಮ್ಮ ಕಲಾತ್ಮಕ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದರು.

- Advertisement - 

ವಸ್ತು ಪ್ರದರ್ಶನದಲ್ಲಿ ಮಕ್ಕಳು ಚಿತ್ರಕಲೆ, ಶಿಲ್ಪಕಲೆ, ಹೂವಿನ ಅಲಂಕಾರ,  ಪೇಪರ್ ಕ್ರಾಫ್ಟ್ ಸೇರಿದಂತೆ ಇತರ ಕಲಾಕೃತಿಗಳು ವಿವಿಧ ವಸ್ತುಗಳನ್ನು ಪ್ರದರ್ಶಿಸಿದರು.

ಈ ಪ್ರದರ್ಶನವು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ.
ಶಿಕ್ಷಕರು ಮತ್ತು ಪೋಷಕರು ಮಕ್ಕಳ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಅವರಿಗೆ ಪ್ರೋತ್ಸಾಹ ನೀಡಿದರು.

- Advertisement - 

ವಸ್ತು ಪ್ರದರ್ಶನವು ಮಕ್ಕಳಿಗೆ ಒಂದು ಮಹತ್ವದ ಅನುಭವವಾಗಿದೆ ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ಪ್ರೇರಣೆ ನೀಡುತ್ತದೆ.
ಜೆಟ್ ಸಂಸ್ಥೆಯ ಕಾರ್ಯದರ್ಶಿ ಗಿರಿಜಾ ಬೆಳಗೆರೆ
, ಪ್ರಾಂಶುಪಾಲ ಷಣ್ಗುಗ ಸುಂದರಂ, ಸಹ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

 

 

Share This Article
error: Content is protected !!
";