ಎಸ್ಐಟಿ ವಿರುದ್ಧವೇ ದೂರು ಸಲ್ಲಿಸಿದ ಸಂದೀಪ್ ಪಾಟೀಲ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ನಡೆದಿದ್ದ 400 ಕೋಟಿ ದರೋಡೆ ಪ್ರಕರಣದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ದೇಶವನ್ನೇ ದಂಗಾಗಿಸಿದ ಈ ದರೋಡೆ ನಡೆದು ದಿನಗಳು ಉರುಳಿದರು ಈವರೆಗೆ ಕಂಟೇನರ್​ಗಳು ಹೋಗಿದ್ದೆಲ್ಲಿಗೆ? ಕಂಟೇನರ್​ನಲ್ಲಿದ್ದ ಹಣ ಎಲ್ಲಿದೆ ಅನ್ನೋದು ರಿವೀಲ್ ಆಗಿಲ್ಲ. ಹೀಗಿರುವಾಗ ದೂರುದಾರ ಸಂದೀಪ್ ಪಾಟೀಲ್​​ ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆಯುವ ಮೂಲಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

- Advertisement - 

ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆದಿರುವ 400 ಕೋಟಿ ದರೋಡೆ ಪ್ರಕರಣದ ದೂರುದಾರ ಸಂದೀಪ್ ಪಾಟೀಲ್​​, ಮಹಾರಾಷ್ಟ್ರ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ. ಘಟನೆ ಸಂಬಂಧ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಎಸ್ಐಟಿ ವಿರುದ್ಧವೇ ದೂರು:
ಮಹಾರಾಷ್ಟ್ರ ಎಸ್​​ಐಟಿ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಿದೆ. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂದೀಪ್, ಈಗಾಗಲೇ ಎಸ್ಐಟಿ ಮತ್ತು ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಮಹಾರಾಷ್ಟ್ರ ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್​​ಗೆ ದೂರು ನೀಡಿದ್ದಾರೆ.

- Advertisement - 

ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ರಾಜ್ಯಗಳ ಗಡಿಯಿರುವ ಚೋರ್ಲಾ ಘಾಟ್​ನಲ್ಲಿ 400 ಕೋಟಿ ರೂ ದರೋಡೆ ಇತ್ತೀಚೆಗೆ ನಡೆದಿತ್ತು. 2 ಸಾವಿರ ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎನ್ನಲಾಗಿತ್ತು.

ದೂರುದಾರ ಸಂದೀಪ್ ಪಾಟೀಲ್​ನಿಂದ ಈ ರಾಬರಿ ಕೇಸ್​ನ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಅನ್ನೋದು ಗೊತ್ತಾಗಿತ್ತು.ಈ ಸಂದೀಪ್ ಪಾಟೀಲ್, ಇದೇ ಕಿಶೋರ್​ನ ಆಪ್ತ. 400 ಕೋಟಿ ದರೋಡೆಯಾಗಿದ್ದು ತಿಳಿಯುತಿದ್ದಂತೆಯೇ ಸಂದೀಪ್​ನನ್ನು ಅಪಹರಿಸಿ, 400 ಕೋಟಿ ಹಣ ಎಲ್ಲಿಟ್ಟಿದ್ದೀಯಾ? ಕಂಟೇನರ್​ಗಳು ಎಲ್ಲಿವೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಸಂದೀಪ್​ಗೆ ಕಿಶೋರ್ ಗ್ಯಾಂಗ್ ಚಿತ್ರಹಿಂಸೆ ನೀಡಿತ್ತು. ಹೀಗೆ ಹಿಂಸೆಗೊಳಗಾಗಿದ್ದ ಸಂದೀಪ್, ಕಿಡ್ನ್ಯಾಪರ್ಸ್​ನಿಂದ ತಪ್ಪಿಸಿಕೊಂಡು ಬಂದು ನಾಸೀಕ್ ಠಾಣೆಗೆ ದೂರು ನೀಡಿದ್ದ.

Share This Article
error: Content is protected !!
";