ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಮೊದಲನೇ ಅಂತಸ್ತಿನ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ಉದ್ಘಾಟಿಸಿದರು
ನಂತರ ಮಾತನಾಡಿ ಈ ವಾಣಿಜ್ಯ ಮಳಿಗೆಗಳು ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಪಟ್ಟಣದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ. ಎಂದು ಹೇಳಿದರು
ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಕೈಗೊಳ್ಳಲಾದ ಈ ಕಾರ್ಯ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಗೆ ದಾರಿದೀಪವಾಗಲಿದೆ ಎಂದರು
ಈ ಸಂಧರ್ಭದಲ್ಲಿ ,ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರು ಶ್ರವಣಗೆರೆ ಹನುಮಂತರಾಯ ಉಪಾಧ್ಯಕ್ಷರು ಅನಿತಾ ಮಹೇಶ್ ನಿರ್ದೇಶಕರು ಎನ್ ಆರ್ ಲಕ್ಷ್ಮಿಕಾಂತ್ ಟಿ ಗಿರಿ ಸ್ವಾಮಿ ವೀರಣ್ಣ ಆರ್ ಲೋಕೇಶ್ ಗೌಡ ಜಿ ತಿಪ್ಪೇಸ್ವಾಮಿ ಎಸ್ ದೇವರಾಜ್ ಆರ್ ಶ್ರೀಧರ್ ಭಾಗ್ಯಮ್ಮ ಹನುಮಂತರಾಯಪ್ಪ
ಸ.ನಾ. ವಿ ರಾಮಚಂದ್ರಪ್ಪ ಪಿಎಪಿಸಿಎಂಎಸ್ ಸಹ ಕಾರ್ಯದರ್ಶಿ ಆರ್ ಗುರುಸ್ವಾಮಿ ಸಿಬ್ಬಂದಿ ವರ್ಗದವರು ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

