ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶರಣ ಸಾಹಿತ್ಯ ಪರಿಷತ್ತು ಚಿತ್ರದುರ್ಗ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಚಿತ್ರದುರ್ಗ ಹಾಗೂ ಸಿವಿಜಿ ಪಬ್ಲಿಕೇಷನ್ಸ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ-19ರಂದು ಗುರುವಾರ ಮಧ್ಯಾಹ್ನ 12.30 ಗಂಟೆಗೆ ನಗರದ ಬಾಪೂಜಿ ವಿದ್ಯಾಸಂಸ್ಥೆ, ಎನ್.ಹೆಚ್.13, ರಲ್ಲಿ ಪ್ರೊ.ಹೆಚ್. ಲಿಂಗಪ್ಪ ರಚಿಸಿರುವ ‘ಬುದ್ಧನಂತೆ ಚಿಂತಿಸಿದ ಅಲ್ಲಮ‘ ಪುಸ್ತಕ ಜನಾರ್ಪಣೆ ಸಮಾರಂಭ ನಡೆಯಲಿದೆ.
ಮುರುಘಾಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೃತಿಯ ಲೇಖಕ ಪ್ರೊ.ಹೆಚ್. ಲಿಂಗಪ್ಪ ಚಿತ್ರದುರ್ಗ, ಅನುವಾದಕ ಪ್ರೊ.ಎಂ.ಜಿ ರಂಗಸ್ವಾಮಿ ಆಶಯ ನುಡಿಯಲಿದ್ದಾರೆ. ಸಂಶೋಧಕ ಡಾ.ಬಿ ರಾಜಶೇಖರಪ್ಪ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಜಾನಪದ ತಜ್ಞ ಡಾ.ಮೀರಾಸಾಬಿ ಹಳ್ಳಿ ಶಿವಣ್ಣ ಮಾತನಾಡಲಿದ್ದಾರೆ. ಕೆ.ಎಂ ವಿರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

