ಬಿಇಎಲ್‍ನಲ್ಲಿ ಎಐ ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು
2026 ನೇ ಫೆಬ್ರವರಿ 16 ರಂದು ಬೆಂಗಳೂರಿನ ನವರತ್ನ ಡಿಫೆನ್ಸ್ ಪಿಎಸ್‍ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ (ಬಿಇಎಲ್) ಭೇಟಿ ನೀಡಿ ಪುಣೆಯಲ್ಲಿರುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು ಮತ್ತು ಕಂಪನಿಯ ಕೃತಕ ಬುದ್ಧಿಮತ್ತೆ ನೀತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಸಚಿವರು, ಬಿಇಎಲ್‍ನ ಬೆಂಗಳೂರು ಸಂಕೀರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಇಎಲ್ ಅಭಿವೃದ್ಧಿಪಡಿಸಿದ ಮೌಂಟೇನ್ ಫೈರ್ ಕಂಟ್ರೋಲ್ ರಾಡಾರ್ ಅನ್ನು ಲೋಕಾರ್ಪಣೆ ಮಾಡಿದರು. ಇದಲ್ಲದೆ, ಬಿಇಎಲ್-ಬೆಂಗಳೂರಿನಲ್ಲಿ ಕ್ಷಿಪಣಿ ಸಂಯೋಜನಾ ಘಟಕವನ್ನು ಉದ್ಘಾಟಿಸಿದರು ಮತ್ತು ಆಕಾಶ್ 3ನೇ ಮತ್ತು 4ನೇ ರೆಜಿಮೆಂಟ್ ಕಾಂಬ್ಯಾಟ್ ಸಿಸ್ಟಮ್‍ಗಳಿಗೆ ಚಾಲನೆ ನೀಡಿದರು.

- Advertisement - 

ಭಾರತೀಯ ಸ್ಟಾರ್ಟ್‍ಅಪ್‍ಗಳು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಸುಧಾರಿತ ದೇಶೀಯ ರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ಇದು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸ್ವದೇಶೀಕರಣಕ್ಕೆ ನೀಡಲಾಗುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು.

ಬಿಇಎಲ್ ಸಹಯೋಗದೊಂದಿಗೆ ಕ್ಷಿಪಣಿ ವ್ಯವಸ್ಥೆಗಳ ತಯಾರಿಕೆಯಲ್ಲಿ ತೊಡಗಿರುವ ಉದ್ಯಮ ಪಾಲುದಾರರಾದ ಬಿಇಎಂಎಲ್, ಬಿಡಿಎಲ್, ಎಲ್&ಟಿ, ಎಂ.ಎಸ್.ಎಂ.ಇಗಳು ಮತ್ತು ಸ್ಟಾರ್ಟ್ ಅಪ್‍ಗಳೊಂದಿಗೆ ಸಂವಾದ ನಡೆಸಿದರು. ಸುಧಾರಿತ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಶೈಕ್ಷಣಿಕ ಪಾಲುದಾರರಾದ ಐಐಟಿ-ಎಂ ಮತ್ತು ಐಐಎಸ್‍ಸಿ ಪ್ರತಿನಿಧಿಗಳೊಂದಿಗೂ ಚರ್ಚೆಗಳು ನಡೆದವು.

- Advertisement - 

ಮಾಹಿತಿ ವಿನಿಮಯದ ಸಂದರ್ಭದಲ್ಲಿ, ಬಿಇಎಲ್‍ನ ಕೇಂದ್ರ ಸಂಶೋಧನಾ ಪ್ರಯೋಗಾಲಯಗಳು, ಎಲೆಕ್ಟ್ರಾನಿಕ್ಸ್ ವಾರ್‍ಫೇರ್ ಮತ್ತು ಫೋಟೋನಿಕ್ಸ್ ಶ್ರೇಷ್ಠತಾ ಕೇಂದ್ರ, ಕಮ್ಯುನಿಕೇಶನ್ ಶ್ರೇಷ್ಠತಾ ಕೇಂದ್ರ, ರಾಡಾರ್ ಮತ್ತು ವೆಪನ್ ಸಿಸ್ಟಮ್ಸ್ ಹಾಗೂ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ ಕೈಗೊಂಡಿರುವ ಸ್ವದೇಶೀಕರಣ ಉಪಕ್ರಮಗಳನ್ನು ಪ್ರದರ್ಶಿಸಲಾಯಿತು. ಸ್ಟಾರ್ಟ್‍ಅಪ್‍ಗಳು ಮತ್ತು ಉದ್ಯಮ ಪಾಲುದಾರರು ಕೂಡ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಸಂಶೋಧನಾ ಸಾಮಥ್ರ್ಯಗಳನ್ನು ಬಲಪಡಿಸುವಲ್ಲಿ ಬಿಇಎಲ್ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಸಚಿವರ ಗಮನಕ್ಕೆ ತರಲಾಯಿತು.

ತ್ವರಿತ ಪ್ರತಿಕ್ರಿಯೆ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳು, ಲಘು ಯುದ್ಧ ವಿಮಾನ ಮಾರ್ಕ್ II (LCA MkII), ಸುಧಾರಿತ ಮಧ್ಯಮ ಯುದ್ಧ ವಿಮಾನ, ಪ್ರಾಜೆಕ್ಟ್ ಕುಶಾ, ಡ್ರೋನ್ ನಿರೋಧಕ ವ್ಯವಸ್ಥೆಗಳು ಮತ್ತು ನೌಕಾ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗಳಂತಹ ಪ್ರಮುಖ ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮಗಳಿಗೆ ಪೂರಕವಾಗಿ ಬಿಇಎಲ್‍ನಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಸಚಿವರಿಗೆ ವಿವರಿಸಲಾಯಿತು.

ಕಾರ್ಯತಂತ್ರದ ಸೆಮಿಕಂಡಕ್ಟರ್ ಸಾಧನಗಳಾದ ಸೆಕ್ಯೂರ್ ಸಿಸ್ಟಮ್ ಆನ್ ಚಿಪ್ಸ್, ಮೊನೊಲಿಥಿಕ್ ಮೈಕ್ರೋವೇವ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಮತ್ತು ಅಪ್ಲಿಕೇಶನ್ ಸ್ಪೆಸಿಫಿಕ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಗಳ ಸ್ವದೇಶೀಕರಣದಲ್ಲಿ ಬಿಇಎಲ್ ಪಾತ್ರದ ಮೇಲೆ ವಿಶೇಷ ಗಮನ ಹರಿಸಲಾಯಿತು. ಇದು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ.

ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳು ಭೂಮಿ, ವಾಯು, ನೌಕಾ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತಿವೆ ಹಾಗೂ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ ಎಂದು ತಿಳಿಸಲಾಯಿತು.

ರಕ್ಷಣಾ ಸಚಿವರು ಬಿಇಎಲ್‍ನ ಸಂಶೋಧನಾ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಎಐ ಮತ್ತು ಸ್ವಾಯತ್ತ ವ್ಯವಸ್ಥೆಗಳಲ್ಲಿನ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪನ್ನಗಳ ತ್ವರಿತ ಅಭಿವೃದ್ಧಿಗಾಗಿ ಸ್ಟಾರ್ಟ್‍ಅಪ್‍ಗಳು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಕರಿಸಲು ಪ್ರೋತ್ಸಾಹಿಸಿದರು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಬಿಇಎಲ್ ವಿವಿಧ ವಿಭಾಗಗಳ ನಡುವಿನ ಸಹಯೋಗ, ನಾವೀನ್ಯತೆ ಮತ್ತು ಕ್ಷಿಪ್ರ ಮೂಲಮಾದರಿ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಅವರು ಒತ್ತಿಹೇಳಿದರು.

 

Share This Article
error: Content is protected !!
";