ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯಡಿ ಅಶಕ್ತ ವೃದ್ದೆಗೆ ವಸತಿಗೆ ಗುದ್ದಲಿ ಪೂಜೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಸಂಜಯ ನಗರದ ವೃದ್ದೆ ಲಕ್ಷ್ಮಮ್ಮ ಅವರು ಮನೆಯಿಲ್ಲದೆ ಸಮಸ್ಯೆ  ಅನುಭವಿಸುತ್ತಿದ್ದು
, ಇದನ್ನು ಮನಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರನ್ನು  ಗುರುತಿಸಿ ಇವರಿಗೆ ಪ್ರತಿ ತಿಂಗಳು 1000 ಮಾಸಾಶನ ನೀಡುತ್ತಿದ್ದು ಪ್ರಸ್ತುತ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ

ಮನೆಗೆ ಕಟ್ಟಲು ರಚನೆ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ  ವಾತ್ಸಲ್ಯ ಮನೆ ಮಂಜೂರಾತಿ ಆಗಿದ್ದು ಇಂದು ಜಿಲ್ಲಾ ಜನಜಾಗೃತಿ ಸದಸ್ಯರಾದ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ  ಕೆ. ಎಂ. ಕೃಷ್ಣಮೂರ್ತಿ ರವರು ಗುದ್ದಲಿ ಪೂಜೆ ಮಾಡುವ ಮೂಲಕ  ಚಾಲನೆ ನೀಡಿದರು.

- Advertisement - 

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ದಿನೇಶ್ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ವಲಯದ ಮೇಲ್ವಿಚಾರಕ ಶಶಿಕಲಾ ತಾಲೂಕಿನ ಸಮನ್ವಯ ಅಧಿಕಾರಿ ಛಾಯ, ಸೇವಾಪ್ರತಿನಿದಿ ಗಂಗಮ್ಮ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

- Advertisement - 

Share This Article
error: Content is protected !!
";