ಮಾಧ್ಯಮಗಳ ಮೇಲೆ ಅಗೋಚರ ತುರ್ತು ಪರಿಸ್ಥಿತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಧ್ಯಮಗಳು ಜನರ ಧ್ವನಿ. ಆದರೆ, ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲೇ ಮಾಧ್ಯಮಗಳ ಧ್ವನಿ ಉಡುಗಿಸಿ, ಅಗೋಚರ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಟೀಕಿಸಿದ್ದಾರೆ.

ಮಾಧ್ಯಮಗಳ ಧ್ವನಿ, ಪ್ರತಿಪಕ್ಷಗಳ ಧ್ವನಿ ಉಡುಗಿಸುವುದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ವಿಚಾರವೇನಲ್ಲ.

- Advertisement - 

ಕಾಂಗ್ರೆಸ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ, ಮಾಧ್ಯಮ ಸ್ನೇಹಿತರು ಇಂದು ವಿಧಾನ ಸೌಧದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಶಾಶ್ವತ ಪ್ರತಿಪಕ್ಷವಾದ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನಿಸಿರುವ ಮಾಧ್ಯಮಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ.

ಸಿದ್ದರಾಮಯ್ಯ ತಕ್ಷಣವೇ ಮಾಧ್ಯಮ ನಿಯಂತ್ರಣದ ಕ್ರಮಗಳನ್ನು ಹಿಂಪಡೆಯಲೇಬೇಕು ಎಂದು ಸಿಟಿ ರವಿ ತಾಕೀತು ಮಾಡಿದರು.

- Advertisement - 

 

 

Share This Article
error: Content is protected !!
";