ಹಳಿ ತಪ್ಪಿದ ಮೆಟ್ರೋ ರೈಲು, ತಪ್ಪಿದ ಭಾರಿ ಅನಾಹುತ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ಕಳೆದ ಜನವರಿ- 15 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಡಿಪೋದಲ್ಲಿ ಅವಘಡ ಸಂಭವಿಸಿ, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ.

ಘಟನೆಗೆ ಏನು ಕಾರಣ?:
ಯೆಲ್ಲೋ ಲೈನ್‌ನ ಹೆಬ್ಬಗೋಡಿ ಡಿಪೋದಲ್ಲಿ ಸಂಭವಿಸಿದ ಡ್ರೈವರ್ಲೆಸ್ ರೈಲು ಹಳಿ ತಪ್ಪಿದ ಘಟನೆಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಪರಿಣಾಮ ಟ್ರ್ಯಾಕ್ ಸ್ಲೀಪರ್‌ಗಳು (ಹಳಿ ಆಧಾರಗಳು), ಮೂರನೇ ರೇಲ್‌, ಟ್ರ್ಯಾಕ್ಷನ್ ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ.

- Advertisement - 

ಈ ಅವಘಡಕ್ಕೆ ಕಾರಣ ಮಾನವನ ಅಜಾಗರೂಕತೆಯೇ, ವ್ಯವಸ್ಥಾತ್ಮಕ ದೌರ್ಬಲ್ಯವೇ ಅಥವಾ ಸಿಗ್ನಲಿಂಗ್ ವ್ಯವಸ್ಥೆಯ ದೋಷವೇ ಎಂಬುದನ್ನು ಪರಿಶೀಲಿಸುತ್ತಿದೆ. ರೈಲು ಆಪರೇಟರ್‌, ಡಿಪೋ ಕಂಟ್ರೋಲರ್ ಹಾಗೂ ಇತರ ಸಿಬ್ಬಂದಿಗಳೂ ತನಿಖೆಗೆ ಒಳಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ತಪ್ಪಿರುವ ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ಆರಂಭಿಸಿದೆ.
ಆರ್.ವಿ. ರೋಡ್
ಬೊಮ್ಮಸಂದ್ರವರೆಗೆ 19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ 8 ರೈಲುಗಳಿದ್ದು, 7 ರೈಲುಗಳು ಕಾರ್ಯಾಚರಣೆಯಲ್ಲಿವೆ. 8ನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದೆ. ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ನರೇಂದ್ರ ಮೋದಿ ಚಾಲನೆ ನೀಡಿದ್ದು, ಆಗಸ್ಟ್ 11ರಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.

- Advertisement - 

 

Share This Article
error: Content is protected !!
";