ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪಶ್ಚಿಮ ಬಂಗಾಳದ ಪ್ರಸಿದ್ಧ ನಾಟಕಕಾರನಾದ ಗಿರೀಶ್ ಚಂದ್ರ ಘೋಷ್ ಶ್ರೀರಾಮಕೃಷ್ಣರ ಅನನ್ಯ ಗೃಹಸ್ಥ ಸದ್ಭಕ್ತನಾಗಿದ್ದನುಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.
ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಗಿರೀಶ್ ಚಂದ್ರ ಘೋಷ್ ನ ಜೀವನ-ಸಾಧನೆ ಮತ್ತು ವ್ಯಕ್ತಿತ್ವ”ದ ವಿಶೇಷ ಉಪನ್ಯಾಸ ನೀಡಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣ ಮತ್ತು ಶಿವನ ನಾಮಸ್ಮರಣೆ, ಶ್ರೀಮತಿ ಗೀತಾ ಪ್ರಕಾಶ್, ರತ್ನಮ್ಮ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ಎಂ ಲಕ್ಷ್ಮೀದೇವಮ್ಮ, ಪ್ರೇಮಾ, ಜಯಮ್ಮ, ಸರ್ವಮಂಗಳಾ, ಸುವರ್ಣಮ್ಮ, ಅನುಸೂಯ ರಾಘವೇಂದ್ರ, ಸೌಮ್ಯ ಪ್ರಸಾದ್, ಸರಸ್ವತಿ ರಾಜು,ಸರಸ್ವತಿ, ಗೀತಾ ವೆಂಕಟೇಶ್ ರೆಡ್ಡಿ,ಅನ್ವಿಕಾ ಭಾಗವಹಿಸಿದ್ದರು.

