ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ  ಸರ್ವಜ್ಞ ಜಯಂತಿ ಆಚರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ವಜ್ಞರು ತನ್ನ  ತ್ರಿಪದಿ ಗಳ ಮೂಲಕ ಸಾಮಾಜಿಕ ಸುಧಾರಣೆ, ಜ್ಞಾನ ಮತ್ತು ನೀತಿ ಬೋಧೆಯನ್ನು ಜನಸಾಮಾನ್ಯರಿಗೆ ತಲುಪಿಸಿದವರು ಮಹಾ ತತ್ವ ಜ್ಞಾನಿ ಸರ್ವಜ್ಞ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ  ಆಚರಣೆ ಸಮಿತಿಯಿಂದ ಆಚರಿಸಲಾಯಿತು.

ನಗರದ ತಾಲ್ಲೂಕು ಕಛೇರಿ ಅವರಣದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಾಸಕ ದೀರಜ್ ಮುನಿರಾಜ್ ಮಾತನಾಡಿ 16ನೇ ಶತಮಾನದ ಪ್ರಸಿದ್ಧ ಕನ್ನಡ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ವಾಸ್ತವಿಕವಾದಿ ಸರ್ವಜ್ಞನ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುತ್ತದೆ.  ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಬಹುದು ಎಂದರು.

- Advertisement - 

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೇ ಪ್ರಮೀಳ ಮಹದೇವ ಮಾತನಾಡಿ ಸರ್ವಜ್ಞ ಸುಮಾರು 16-17ನೇ ಶತಮಾನ ಕನ್ನಡದ ಅತ್ಯಂತ ಜನಪ್ರಿಯ ತ್ರಿಪದಿ ಕವಿ, ದಾರ್ಶನಿಕ ಮತ್ತು ಸಮಾಜ ಸುಧಾರಕ. ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಜನಿಸಿದ ಇವರ ಮೂಲ ಹೆಸರು ಪುಷ್ಪ ದತ್ತ ಸರ್ವಜ್ಞಎಂಬ ಅಂಕಿತನಾಮ ದೊಂದಿಗೆ ಮೂರು ಸಾಲುಗಳ (ತ್ರಿಪದಿ) ಮೂಲಕ ಸಾಮಾಜಿಕ, ನೈತಿಕ ಮತ್ತು ಲೌಕಿಕ ವಿಷಯಗಳನ್ನು ಸರಳವಾಗಿ ಹೇಳಿ, ಜನಪದ ಕವಿಯಾಗಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ಇವರದಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲುಕು ದಂಡಾಧಿಕಾರಿ ಮಲ್ಲಪ್ಪ ಕೆ  ಯರಗೋಳಕುಂಬಾರ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.

- Advertisement - 

Share This Article
error: Content is protected !!
";