ಶಿರವಾರ ಎಂಪಿಸಿಎಸ್ ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಕೃಷ್ಣ  ಅವಿರೋಧ ಆಯ್ಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಶಿರವಾರ ಗ್ರಾಮದ  (ಎಂ ಪಿ ಸಿ ಎಸ್) ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಸುರೇಶ್ ಎಸ್. ಹಾಗೂ ಉಪಾಧ್ಯಕ್ಷರಾಗಿ ಕೃಷ್ಣ ಎಸ್.ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿ ಕವಿತ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

- Advertisement - 

ಫೆ.6 ರಂದು ನಡೆದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಬಸವರಾಜ್ (ಎಸ್‌ಸಿ ಮೀಸಲು), ಅಶ್ವತ್ಥಪ್ಪ ಎಸ್.ಎನ್. (ಬಿಸಿಎಂ-ಬಿ ಮೀಸಲು), ಕಮಲಮ್ಮ ಹಾಗೂ ಪದ್ಮಾವತಿ (ಮಹಿಳಾ ಮೀಸಲು) ಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ರಾಮಕುಮಾರ್‌ ಎಸ್.ಎಚ್., ವೆಂಕಟೇಶಪ್ಪ, ವೆಂಕಟಸ್ವಾಮಿ, ಆಕಾಶ್, ರವಿಕುಮಾ‌ರ್,ಬಸವರಾಜು ಎಸ್.ಎ., ಪಿಳಪ್ಪ ಅವರು ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ನೂತನ ಅಧ್ಯಕ್ಷ ಸುರೇಶ್ ಎಸ್.ಮಾತನಾಡಿ, ‘ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಶ್ರಮಿಸುವುದಾಗಿ ಮತ್ತು ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಕಾಪಾಡಿ. ಸಂಘದ ಬೆಳವಣಿಗೆಗೆ ಶ್ರಮಿಸುವೆ ಎಂದರು.

- Advertisement - 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೃಷ್ಣ ಎಸ್.ಎಸ್. ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳು ಸಿಬ್ಬಂದಿ ವರ್ಗ ಗ್ರಾಮಸ್ಥರು ಹಾಜರಿದ್ದರು.

Share This Article
error: Content is protected !!
";