ವಿದ್ಯಾರ್ಥಿನಿಯರು ಹಾಗೂ ಪ್ರಾಂಶುಪಾಲೆ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ ಶಿಪ್ ಕ್ಯಾಂಪಿಗೆ ಆಯ್ಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮಾನಸಾಧಾರ ಟ್ರಸ್ಟ್ ನ ಮನಃಸ್ಫೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿಯರಾದ ಕು.ಮನ್ಯಥಾ.ಎಂ ಮತ್ತು ಕು.ಕೀರ್ತನಾ.ಹೆಚ್.ಬಿ ಯವರು ಇದೆ ಫೆಬ್ರವರಿ
22 ರಿಂದ 27 ರವರೆಗೆ ಹರಿಯಾಣದ ರೋಹ್ತಕ್‌ನಲ್ಲಿ ನಡೆಯಲಿರುವ ಸ್ಪೆಷಲ್ ಒಲಂಪಿಕ್ ಭಾರತ್ ನ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ಶಿಪ್ ಕ್ಯಾಂಪಿಗೆ ಆಯ್ಕೆಯಾಗಿದ್ದು ಜೊತೆಗೆ ಮನಃಸ್ಫೂರ್ತಿ ವಿಶೇಷ ಶಾಲೆಯ ಪ್ರಾಂಶುಪಾಲೆ ಜ್ಯೋತಿ ಅರುಣ್ ಕುಮಾರ್ ರವರು ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಈ ಕುರಿತು ಮಾನಸ ಸಮೂಹ ಸಂಸ್ಥೆಯು ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯರ ಪರಿಶ್ರಮ, ಸಮರ್ಪಣೆ ಮತ್ತು ದೃಢನಿಶ್ಚಯವೇ ಈ ಸಾಧನೆಗೆ ಕಾರಣವೆಂದು ತಿಳಿಸಿದೆ. ಮನಃಸ್ಫೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿಯರಿಗೆ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ಶಿಪ್ ಕ್ಯಾಂಪಿನಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿನಿಯರು ಇನ್ನಷ್ಟು ಉತ್ತಮ ಸಾಧನೆ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಲಿ ಎಂದು ಶುಭಾಶಯ ಕೋರಲಾಗಿದೆ.

- Advertisement - 

ಫೆಬ್ರವರಿ 22 ರಂದು ಹರಿಯಾಣಕ್ಕೆ ಹೋಗುತ್ತಿರುವ ಕು.ಮನ್ಯಥಾ.ಎಂ, ಕು.ಕೀರ್ತನಾ.ಹೆಚ್.ಬಿ ಮತ್ತು ಜ್ಯೋತಿ ಅರುಣ್ ಕುಮಾರ್ ರವರಿಗೆ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈ, ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಭಾಗ್, ಸಂಸ್ಥೆಯ ಖ್ಯಾತ ನರರೋಗ ತಜ್ಞ ಡಾ. ವಾಮನ್ ಶಾನ್ ಭಾಗ್, ಮನಃಸ್ಫೂರ್ತಿ ಕಲಿಕಾ ಕೇಂದ್ರದ ಪ್ರಾಂಶುಪಾಲೆ ರಂಗನಾಯಕಿ ಹಾಗೂ ಮನಃಸ್ಫೂರ್ತಿಯ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

- Advertisement - 
Share This Article
error: Content is protected !!
";