ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸೀರೆ ಸಂತೆ‘ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡಿದ್ದರು.
ನಮ್ಮ ನಾಡಿನ ನೇಕಾರರ ಅಮೃತ ಹಸ್ತದಿಂದ ಅರಳಿದ ವೈವಿಧ್ಯಮಯ ರೇಷ್ಮೆ, ಹತ್ತಿ ಹಾಗೂ ಕಲಾತ್ಮಕ ಸೀರೆಗಳ ಪ್ರದರ್ಶನ ಕಣ್ಮನ ಸೆಳೆಯುವಂತಿತ್ತು.
ಒಂದೇ ಸೂರಿನಡಿ ಇಷ್ಟೊಂದು ಬಗೆಯ ಬಣ್ಣ-ಬಣ್ಣದ ಸೀರೆಗಳನ್ನು ಹಾಗೂ ನೇಕಾರರ ಶ್ರಮವನ್ನು ಕಣ್ಣಾರೆ ಕಂಡು ಸಂತಸವಾಯಿತು.
ಸ್ಥಳೀಯ ನೇಕಾರರಿಗೆ ಮಾರುಕಟ್ಟೆ ಒದಗಿಸುವ ಹಾಗೂ ನಮ್ಮ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರಾದ ದೀರಜ್ ಮುನಿರಾಜ್ ಅವರ ಈ ಪ್ರಯತ್ನಕ್ಕೆ ಅಶೋಕ್ ಅಭಿನಂದ ಸಲ್ಲಿಸಿದರು.

