ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹರಿಹರ ನಗರದ ಜೆ.ಸಿ ಬಡಾವಣೆಯಲ್ಲಿರುವ ರಾಮಮಂದಿರದ ಆವರಣದಲ್ಲಿ ದೂಡಾ ವತಿಯಿಂದ ಆಯೋಜಿಸಲಾದ ವಿವಿಧ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹರಿಹರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ವಾತಾವರಣ ನಿರ್ಮಾಣ ಮತ್ತು ಸಾರ್ವಜನಿಕರಿಗೆ ಉತ್ತಮ ವಿನೋದ ಹಾಗೂ ಆರೋಗ್ಯಕರ ಪರಿಸರ ಒದಗಿಸುವ ಉದ್ದೇಶದಿಂದ ಕೆಳಗಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದರು ತಿಳಿಸಿದರು.
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 1 ಕೋಟಿ 15 ಲಕ್ಷ ವೆಚ್ಚದಲ್ಲಿ ಹರಿಹರ ನಗರದ ವಿವಿಧ ಉದ್ಯಾನಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ನಗರದ ಹಸಿರು ವಾತಾವರಣವನ್ನು ವೃದ್ಧಿಸಿ, ನಾಗರಿಕರಿಗೆ ಉತ್ತಮ ವಿಶ್ರಾಂತಿ ಮತ್ತು ಮನರಂಜನಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
1.ಮಹಜೇನಹಳ್ಳಿ ಗ್ರಾಮದಲ್ಲಿ ಉದ್ಯಾನವನ ಅಭಿವೃದ್ಧಿ – 21 ಲಕ್ಷ
2.ಮಹಜೇನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಉದ್ಯಾನವನ ಅಭಿವೃದ್ಧಿ – 23 ಲಕ್ಷ
3.ಮಹಜೇನಹಳ್ಳಿಯ ರಿ.ಸ.ನಂ 9/2 ರಲ್ಲಿ ಉದ್ಯಾನವನ ಅಭಿವೃದ್ಧಿ – 25 ಲಕ್ಷ
4.ಕೊಂಡಜ್ಜಿ ರಸ್ತೆಯ ಶಿವಪುರದಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ – 23 ಲಕ್ಷ
5.ಹರಿಹರ ನಗರದ 4ನೇ ವಾರ್ಡ್ ಲೇಬರ್ ಕಾಲೋನಿ ಉದ್ಯಾನವನ ಅಭಿವೃದ್ಧಿ – 25 ಲಕ್ಷ
6.ಹರಿಹರ ನಗರದ ಜೀಜಾಮಾತಾ ಕಾಲೋನಿಯಲ್ಲಿರುವ ಉದ್ಯಾನವನ ಅಭಿವೃದ್ಧಿ – 21 ಲಕ್ಷ
ಈ ಎಲ್ಲಾ ಯೋಜನೆಗಳು ಸ್ಥಳೀಯ ನಾಗರಿಕರಿಗೆ ವಿಶ್ರಾಂತಿ, ವ್ಯಾಯಾಮ ಹಾಗೂ ಮಕ್ಕಳ ಆಟೋಪಾಯಕ್ಕಾಗಿ ಸುಸಜ್ಜಿತ ಉದ್ಯಾನವನಗಳನ್ನು ಒದಗಿಸುವುದರ ಜೊತೆಗೆ ನಗರದ ಸೌಂದರ್ಯವರ್ಧನೆಗೂ ಸಹಕಾರಿಯಾಗಲಿದೆ.

