ಕೆಯುಡಬ್ಲ್ಯೂಜೆ: ಬೆಂಗಳೂರು ನಗರ ಘಟಕ ಚುನಾವಣೆಗೆ ಬಿರುಸಿನ ಮತದಾನ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ಘಟಕದ ಆಡಳಿತ ಮಂಡಳಿ ಆಯ್ಕೆಗೆ ಇಂದು ಬಿರುಸಿನ ಮತದಾನ  ನಡೆಯುತ್ತಿದೆ.

ನ್ಯಾಯಲಯದ ಆದೇಶದ ಮೇರೆಗೆ ಚುನಾವಣೆಯು ನಡೆಯುತ್ತಿದ್ದು, ಬೆಳಗ್ಗೆ 9 ಗಂಟೆಗೆ ಕಂದಾಯಭವನದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮತದಾನ ಆರಂಭಗೊಂಡಿದೆ. ಪತ್ರಕರ್ತ ಸದಸ್ಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

- Advertisement - 

ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಮಾಜಿ ಅಧ್ಯಕ್ಷರುಗಳಾದ ಬಿ.ವಿ.ಮಲ್ಲಿಕಾರ್ಜುನಯ್ಯ, ವಿ.ವೆಂಕಟೇಶ್, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ ಅವರು ಸೇರಿದಂತೆ ಹಲವರು ಮತಚಲಾವಣೆ ಮಾಡಿದರು.

- Advertisement - 

ಬೆಳಿಗ್ಗೆ 11.30ರ ವೇಳೆಗೆ ಶೇಕಡ.30ರಷ್ಟು ಮತದಾನ ಆಗಿದ್ದು ಮದ್ಯಾಹ್ನ 3ಗಂಟೆಗೆ ಮತದಾನ  ಅಂತ್ಯಗೊಳ್ಳಲಿದೆ. ಮೂರು ಗಂಟೆ ನಂತರ ಮತ ಎಣಿಕೆ ನಡೆಯಲಿದೆ.

ಹಿರಿಯ ಪತ್ರಕರ್ತರೂ, ಕೆಯುಡಬ್ಲ್ಯೂಜೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಂಜುಂಡಪ್ಪ ವಿ ಅವರು ಮತದಾನ ಪ್ರಕ್ರಿಯೆ ನಡೆಯಿತು.

Share This Article
error: Content is protected !!
";