ನಗರಸಭೆ ವತಿಯಿಂದ ಹಂದಿಗಳ ಕಾರ್ಯಾಚರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವತಿಯಿಂದ ಬೆಳ್ಳಂಬೆಳಿಗ್ಗೆ ನಗರದ ಹಂದಿಗಳನ್ನು ಹೊರ ಹಾಕುವ ಕಾರ್ಯಾಚರಣೆ ನಡೆಸಲಾಯಿತು.

 ಹಂದಿ ಮಾಲೀಕರುಗಳಿಗೆ ನಗರಸಭೆ ಪೌರಾಯುಕ್ತ ಎ.ವಾಸೀಂ ಅವರು 6 ರಿಂದ 7 ಬಾರಿ ಸಭೆ ಕರೆದು ನಗರಗಳಲ್ಲಿ ಹಂದಿಗಳು ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕರಿಗೆ ಮಕ್ಕಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ ತಿಳಿಸಿದ್ದರೂ ಕೂಡ ಅಲ್ಲದೆ TB ಸರ್ಕಲ್ ಹತ್ತಿರ ಬೈಕ್ ಸವಾರನಿಗೆ ಅಪಘಾತ ಸಂಭವಿಸಿದ್ದರು ಎಚ್ಚೆತ್ತುಕೊಳ್ಳದ ಹಂದಿ ಮಾಲೀಕರುಗಳಿಗೆ ನಗರ ಸಭೆ ವತಿಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಿ ಸುಮಾರು 30 ರಿಂದ 35 ಹಂದಿಗಳನ್ನು ಹಿಡಿದು ಊರಿಂದ ಹೊರಗೆ ಸಾಗಿಸಿದ್ದಾರೆ.

- Advertisement - 

ಇನ್ನು ಮುಂದೆ ಹಂದಿ ಮಾಲೀಕರು ಎಚ್ಚುತ್ತುಕೊಳ್ಳದೆ ಹೋದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಎ. ವಾಸೀಂ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

- Advertisement - 

 

Share This Article
error: Content is protected !!
";