ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಲೇಖಕಿಯರ ಸಂಘದಿಂದ ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಗೆ ಕವಿತೆಗಳ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷೆ ನಿರ್ಮಲ ಮರಡಿಹಳ್ಳಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ “ಮಹಿಳಾ ದಿನಾಚರಣೆ”ಯ ಅಂಗವಾಗಿ, ಮಹಿಳಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತ ವಿದ್ಯಾರ್ಥಿನಿಯರು,
ಮಹಿಳೆಯರು ತಮ್ಮ ಒಂದು ಕವಿತೆಯನ್ನು ಈ ಕೆಳಗೆ ನೀಡಲಾಗಿರುವ ಯಾವುದಾದರು ಒಂದು ನಂಬರಿಗೆ ದಿನಾಂಕ ೦5/೦3/2026 ಒಳಗೆ ಕಳುಹಿಸಬಹುದಾಗಿದೆ.
ಕವಿತೆಗಳ ಆಯ್ಕೆಯನ್ನು ಆಧರಿಸಿ ಕವಿಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಘದ ಅಧ್ಯಕ್ಷೆ ನಿರ್ಮಲ ಮರಡಿಹಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆಗಳು-
ನಿರ್ಮಲ ಮರಡಿಹಳ್ಳಿ- ಅಧ್ಯಕ್ಷರು, ಕಲೇಸಂ,ಚಿತ್ರದುರ್ಗ 99015 27137, ದೀಪಿಕಾಬಾಬು ಕಾರ್ಯದರ್ಶಿಗಳು,ಕಲೇಸಂ. 7996321323, ಡಿ.ಶಬ್ರಿನಾ ಮಹಮದ್ ಅಲಿ: ಉಪಾಧ್ಯಕ್ಷರು,ಕಲೇಸಂ. 97318 79840.

