ದೊಡ್ಡಬಳ್ಳಾಪುರಕ್ಕೆ ಕೊಂಗಾಡಿಯಪ್ಪ ನವರ ಕೊಡುಗೆ ಅಪಾರ-ಎಂ. ಜಿ. ಶ್ರೀನಿವಾಸ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಅಭಿವೃದ್ದಿಗೆ  ಲೋಕಸೇವಾನಿರತ ಡಿ. ಕೊಂಗಾಡಿಯಪ್ಪನವರ ಕೊಡುಗೆ ಅಪಾರವಾಗಿದ್ದು
, ಇಂತಹ ಮಹನೀಯರ ಪುತ್ಥಳಿ ಸ್ಥಾಪನೆ ಶೀಘ್ರವಾಗಿ ನಗರಸಭೆ ಕಾರ್ಯಾಲಯದ ಮುಂಬಾಗ ಆಗಬೇಕಿದೆ. ಪುತ್ಥಳಿ ನಿರ್ಮಾಣದ ಅಂದಾಜ ವೆಚ್ಚ  ಕುರಿತು ನಗರಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುಮೋದನೆ ದೊರೆಯಲಿದೆ ಎಂದು ದೇವಾಂಗ ಮಂಡಲಿ ಅಧ್ಯಕ್ಷ  ಹಾಗೂ ನಗರಸಭಾ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು.

ಲೋಕಸೇವಾನಿರತ ಕೊಂಗಾಡಿಯಪ್ಪನವರ 166ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಂಗವಾಗಿ ನಗರದ ಮುಖ್ಯರಸ್ತೆಯ ಮಾರುಕಟ್ಟೆಶಾಲೆಯ ಮುಂಭಾಗದಲ್ಲಿನ ಕೊಂಗಾಡಿಯಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ

- Advertisement - 

ಕೊಂಗಾಡಿಯಪ್ಪನವರ ಪರಿಶ್ರಮದಿಂದಾಗಿ ನಮ್ಮ ಊರಿನಲ್ಲಿ ಅಂದಿನ ಕಾಲದಲ್ಲಿಯೇ ವಿದ್ಯುತ್, ಕೊಳವೆ ಬಾವಿಪ್ರೌಢಶಾಲೆ, ಆಸ್ಪತ್ರೆಪಶು ವೈದ್ಯಶಾಲೆ, ಕೈಮಗ್ಗ ಮತ್ತು  ಗೃಹ ಕೈಗಾರಿಕಾ ತರಬೇತಿ ಕೇಂದ್ರಗಳು ಸ್ಥಾಪನೆಯಾಗಿದ್ದವು.  ಅಧಿಕಾರಿಗಳ ಬಳಿಗೆ ತೆರಳಿ ಊರಿಗೆ ಆಗಬೇಕಾದ ಕೆಲಸಗಳನ್ನು ನಿವೇದನೆ ಮಾಡಿ ಆಗುವವರೆಗೂ ಬೆಂಬಿಡದೆ ಮಾಡಿಸುತ್ತಿದ್ದರು. ಕೊಂಗಾಡಿಯಪ್ಪನವರು ಊರಿನ ಯಾವ ಸಮಸ್ಯೆಯನ್ನಾಗಲೀ ಬಗೆಹರಿಸಲು ದುಡಿಯುತ್ತಿದ್ದರು. ಶಿಕ್ಷಣ, ಪರಿಸರ, ಸಮಾಜ ಸೇವೆಗಳಿಗೆ ಒತ್ತು ನೀಡಿದ್ದ ಅವರ ಬದುಕು ಹಾಗೂ ಜೀವನ ಕ್ರಮ ಇಂದಿನ ಪೀಳಿಗೆಗೆ ತಿಳಿಯಬೇಕು ಎಂದರು.

ನಗರಸಭೆ ಸದಸ್ಯತ. ನ. ಪ್ರಭುದೇವ್ ಮಾತನಾಡಿ ಕೊಂಗಾಡಿಯಪ್ಪನವರ  ನಿಸ್ವಾರ್ಥ ಸೇವೆ, ಶ್ರಮದಿಂದಾಗಿ ಇಂದು ದೊಡ್ಡಬಳ್ಳಾಪುರ ರಾಜ್ಯದಲ್ಲಿಯೇ ಹೆಸರುವಾಸಿಯಾಗಲು ಕಾರಣವಾಗಿದೆ. ನೇಕಾರಿಕೆಗೆ ಆಸರೆಯಾಗಿರುವ ವಿದ್ಯುತ್, ಯಾಂತ್ರಿಕ ತರಬೇತಿ ಕೇಂದ್ರ ಬರಲು ಕೊಂಗಾಡಿಯಪ್ಪನವರು ಕಾರಣರಾಗಿದ್ದರು ಎಂದರು.

- Advertisement - 

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಆರ್.ಕಾರ್ತಿಕೇಶ್ವರ, ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್, ಸೇರಿದಂತೆ ನಗರಸಭೆ ಸದಸ್ಯರು, ದೇವಾಂಗ ಮಂಡಲಿ ನಿರ್ದೇಶಕರು ಭಾಗವಹಿಸಿದ್ದರು.

ನಗರಸಭೆಯಿಂದ ಕೊಂಗಾಡಿಯಪ್ಪ ಜಯಂತಿ ಆಚರಣೆ-
ನಗರಸಭೆ ವತಿಯಿಂದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ 166ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಂಜಯನಗರದಲ್ಲಿರುವ ಕೊಂಗಾಡಿಯಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್,ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಗರಸಭೆ ಸದಸ್ಯೆ ಎಸ್. ಸುಧಾರಾಣಿ ಲಕ್ಷ್ಮೀನಾರಾಯಣ ಸೇರಿದಂತೆ ನಗರಸಭೆ ಸದಸ್ಯರು ಭಾಗವಹಿಸಿದ್ದರು.

Share This Article
error: Content is protected !!
";